ಬೆಂಗಳೂರು, ಜೂ.11- ಎರಡು ಪ್ರತ್ಯೇಕ ಘಟನೆಗಳಲ್ಲಿ ರೈಲ್ವೆ ಹಳಿ ದಾಟಲು ಮುಂದಾದ ವೃದ್ಧ ಹಾಗೂ ಯುವಕನೊಬ್ಬ ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಗ್ಗದಾಸಪುರ ರೈಲ್ವೆ ಗೇಟ್ ಸಮೀಪದ ಬೈಯಪ್ಪನಹಳ್ಳಿ-ಬೆಳ್ಳಂದೂರು ರೈಲ್ವೆ ನಿಲ್ದಾಣಗಳ ಮಧ್ಯೆ ಹಳಿ ದಾಟುತ್ತಿದ್ದ 60 ವರ್ಷದ ವೃದ್ಧರೊಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಇವರ ಹೆಸರು ವಿಳಾಸ ತಿಳಿದು ಬಂದಿಲ್ಲ.
ಮತ್ತೊಂದು ಪ್ರಕರಣದಲ್ಲಿ ಬೆಳ್ಳಂದೂರು ಕಾರ್ಮಲ್ರಾಮ್ ರೈಲ್ವೆ ನಿಲ್ದಾಣದ ಪಣತ್ತೂರು ಕ್ರಾಸ್ ಬಳಿ ಹಳಿ ದಾಟುತ್ತಿದ್ದ ದಾಮೋದರ (22) ಎಂಬಾತ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ.
ಇವರಿಬ್ಬರ ಮೃತ ದೇಹಗಳನ್ನು ಬೌರಿಂಗ್ ಆಸ್ಪತ್ರೆಯಲ್ಲಿಡಲಾಗಿದೆ.