ಚಾರಿತ್ರಿಕ ಶೃಂಗಸಭೆ: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ 65 ವರ್ಷಗಳ ಹಗೆತನ ಶಮನ

ಸಿಂಗಪುರ್, ಜೂ.10-ಹಲವು ವಿಘ್ನಗಳ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂ.12ರಂದು ಸಿಂಗಪುರ್‍ನಲ್ಲಿ ನಡೆಯುವ ಚಾರಿತ್ರಿಕ ಶೃಂಗಸಭೆಗೆ ವೇದಿಕೆ ಸಜ್ಜಾಗಿದೆ. ಇವರಿಬ್ಬರ ಮಾತುಕತೆ ಮತ್ತು ನಂತರದ ಫಲಶ್ರುತಿ ಜಗತಿನ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ 65 ವರ್ಷಗಳ ಹಗೆತನ ಇದರೊಂದಿಗೆ ಶಮನವಾಗಲಿದೆ.
ಮಾರಕ ಅಣ್ವಸ್ತ್ರಗಳು ಹಾಗೂ ವಿನಾಶಕಾರಿ ಕ್ಷಿಪಣಿಗಳನ್ನು ಪ್ರಯೋಗಿಸುತ್ತಾ ಏಷ್ಯಾ ಸೇರಿದಂತೆ ವಿಶ್ವದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ ಉತ್ತರ ಕೊರಿಯಾ ಹಾಗೂ ಇದೇ ಕಾರಣಕ್ಕಾಗಿ ಕಿಮ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಯುದ್ಧ ಸಾಧ್ಯತೆ ವಾತಾವರಣ ನಿರ್ಮಿಸಿದ್ದ ಅಮೆರಿಕ ಈಗ ಶಾಂತಿ ಮಾತುಕತೆಗೆ ಮುನ್ನುಡಿ ಬರೆಯುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಅಣ್ವಸ್ತ್ರಗಳನ್ನು ತ್ಯಜಿಸಬೇಕೆಂಬ ಟ್ರಂಪ್ ಬೇಡಿಕೆಗೆ ಆರಂಭದಲ್ಲಿ ಅಪಸ್ವರ ಎತ್ತಿದ್ದ ಕಿಮ್ ಕೊನೆಗೂ ಅದಕ್ಕೆ ಸಮ್ಮತಿಸಿದ್ದಾರೆ. ಇದನ್ನು ಸ್ವಾಗತಿಸಿರುವ ಅಮೆರಿಕ ಶೃಂಗಸಭೆಗೆ ಹಸಿರು ನಿಶಾನೆ ತೋರಿದ ನಂತರ ನಾಡಿದ್ದು, ಮಂಗಳವಾರ ಈ ಎರಡೂ ದೇಶಗಳ ನಡುವೆ ಅಭೂತಪೂರ್ವ ಶಾಂತಿ ಮಾತುಕತೆಗೆ ಅಂತಿಮ ಸಿದ್ದತೆಗಳು ನಡೆದಿವೆ. ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ 65 ವರ್ಷಗಳ ಹಗೆತನ ಇದರೊಂದಿಗೆ ಶಮನವಾಗಲಿದೆ.
ಟ್ರಂಪ್ ಪ್ರತಿಕ್ರಿಯೆ : ಜೂ.12ರ ಸಿಂಗಪುರ್ ಐತಿಹಾಸಿಕ ಶೃಂಗಕ್ಕೆ ಪೂರ್ವಭಾವಿಯಾಗಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಇದು ಒಂದೇ ಭಾರಿ ನಡೆಯುವ ಯಶಸ್ಸಿನ ಮಾತುಕತೆ. ಕಿಮ್ ಅವರನ್ನು ಭೇಟಿಯಾದ ಒಂದೇ ನಿಮಿಷದೊಳಗೆ ಅವರ ಮನಸ್ಸಿನ ಭಾವನೆಗಳು ನನಗೆ ಅರ್ಥವಾಗುತ್ತದೆ ಎಂಧು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ