ಗುಟ್ಕಾ ಮಾರಾಟಕ್ಕೆ ನಿಷೇಧ ಹೇರಲು ಬಿಹಾರ ಸರ್ಕಾರ ಕೇಂದ್ರಕ್ಕೆ ಪತ್ರ

ಪಾಟನಾ,ಜೂ.9-ಖೈನಿ(ಗುಟ್ಕಾ) ಮಾರಾಟಕ್ಕೆ ನಿಷೇಧ ಹೇರಲು ಬಿಹಾರ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.
ಎರಡು ವರ್ಷಗಳ ಹಿಂದೆ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಇದೀಗ, ಖೈನಿ (ಗುಟ್ಕಾ) ಮಾರಾಟದ ಮೇಲೂ ನಿಷೇಧ ಹೇರಲು ಮುಂದಾಗಿದೆ.
ಕೇಂದ್ರಕ್ಕೆ ಖೈನಿಯನ್ನು ಆಹಾರ ಉತ್ಪನ್ನವಾಗಿ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿಕೊಂಡಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಖೈನಿಯನ್ನು ಆಹಾರ ಉತ್ಪನ್ನವೆಂದು ಪರಿಗಣಿಸಿದರೆ, ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣವೊಡ್ಡಿ ಅವುಗಳ ಮೇಲೆ ನಿಷೇಧ ಹೇರುವ ಅಧಿಕಾರ ಸರ್ಕಾರಕ್ಕೆ ಲಭಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ