ಮೈಸೂರು, ಜೂ.8- ಸ್ವಚ್ಛತಾ ನಗರಿ ಎಂದೇ ಹೆಸರು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿಗೆ ಡಂಪ್ ಮಾಡಲು ಹೊರರಾಜ್ಯದಿಂದ ಟನ್‍ಗಟ್ಟಲೆ ಕಸದ ರಾಶಿಯನ್ನು ಲೋಡ್ ಮಾಡಿಕೊಂಡು ಬಂದಿದ್ದ 20ಕ್ಕೂ ಹೆಚ್ಚು ಲಾರಿಗಳನ್ನು ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪ ಪಾಲಿಕೆ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ.
ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಬೆನ್ನಲ್ಲೇ ಅಲ್ಲಿಂದ ಕಸದ ರಾಶಿಯನ್ನು ಲಾರಿಗಳಲ್ಲಿ ಲೋಡ್ ಮಾಡಿಕೊಂಡು ಬಂದು ಮೈಸೂರಿನಲ್ಲಿ ಡಂಪ್ ಮಾಡಲಾಗುತ್ತಿದೆ ಎಂಬ ವಿಷಯ ನಾಗರಿಕರನ್ನು ಆತಂಕಕ್ಕೀಡುಮಾಡಿದೆ.
ಕಳೆದ ಒಂದೂವರೆ ವರ್ಷದಿಂದ ಕಸವನ್ನು ಲೋಡ್ ಮಾಡಿಕೊಂಡು ಬಂದು ನಗರದ ಭರತನಗರ ಹಾಗೂ ಇನ್ನಿತರ ಕಡೆ ಡಂಪ್ ಮಾಡುತ್ತಿದ್ದುದು ಇದೀಗ ಬೆಳಕಿಗೆ ಬಂದಿದೆ.
ಚೆಕ್‍ಪೆÇೀಸ್ಟ್‍ಗಳಲ್ಲಿ ಪೆÇಲೀಸರು ಸಾವಿರಾರು ರೂ. ಪಡೆದು ಕಸದ ಲಾರಿಗಳನ್ನು ನಗರದೊಳಗೆ ಬಿಡುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪಾಲಿಕೆಯ ಕೆಲವು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ದೇವರ ನಾಡು ಕೇರಳದಿಂದ ಸಾಂಸ್ಕøತಿಕ ನಗರಿ ಮೈಸೂರಿಗೆ ಒಂದು ಲಾರಿಯಲ್ಲಿ ಕನಿಷ್ಠ 5 ರಿಂದ 6 ಟನ್‍ನಷ್ಟು ಕಸವನ್ನು ಲೋಡ್ ಮಾಡಿಕೊಂಡು ಸುಮಾರು 15ಕ್ಕೂ ಹೆಚ್ಚು ಲಾರಿಗಳು ಬರುತ್ತಿದ್ದುದು ಇದೀಗ ಬೆಳಕಿಗೆ ಬಂದಿದೆ.
ಒಂದು ಮೂಲದ ಪ್ರಕಾರ, ಒಂದು ಲಾರಿಗೆ 25 ಸಾವಿರ ರೂ.ನಂತೆ ಪೆÇಲೀಸರಿಗೆ ಚೆಕ್‍ಪೆÇೀಸ್ಟ್‍ಗಳಲ್ಲಿ ನೀಡಿ ನಗರದೊಳಗೆ ಪ್ರವೇಶ ಪಡೆಯಲಾಗುತ್ತಿದೆ ಎಂಬ ಆರೋಪ ಸಹ ಕೇಳಿಬರುತ್ತಿದೆ.
ಕೇರಳದ ರಿಜಿಸ್ಟ್ರೇಷನ್ ಹೊಂದಿರುವ ಈ ಲಾರಿಗಳ ಚಾಲಕರುಗಳಿಗೆ ನೀಡಿರುವ ಬಿಲ್‍ಗಳಲ್ಲಿ ಪ್ಲಾಸ್ಟಿಕ್ ವೇಸ್ಟೇಜ್ ಎಂದು ಬರೆದಿರುವುದನ್ನು ಚೆಕ್‍ಪೆÇೀಸ್ಟ್‍ಗಳಲ್ಲಿ ಪೆÇಲೀಸರು ಗಮನಿಸಿ ಲಾರಿಯನ್ನು ಪರಿಶೀಲಿಸದೆ ನಗರದೊಳಗೆ ಬಿಟ್ಟಿರುವುದು ಅವರ ಕರ್ತವ್ಯಲೋಪವನ್ನು ತೋರಿಸುತ್ತದೆ.
ನಗರದೊಳಗೆ ಕಸದ ಲಾರಿಗಳು ಬರುತ್ತಿವೆ ಎಂಬ ವಿಷಯ ತಿಳಿಯುತ್ತಿದ್ದಂತೆ ಇಂದು ಬೆಳಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಪೆÇಲೀಸರು ಲಾರಿಗಳನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಆಸ್ಪತ್ರೆಗಳ ತ್ಯಾಜ್ಯ, ಕಸದ ತ್ಯಾಜ್ಯ ಹಾಗೂ ಮನೆಗಳ ತ್ಯಾಜ್ಯ ಇರುವುದು ಕಂಡುಬಂದಿದೆ.
ಸುದ್ದಿ ತಿಳಿದ ಪಾಲಿಕೆ ಆಯುಕ್ತ ಜಗದೀಶ್ ಅವರು ಆರೋಗ್ಯಾಧಿಕಾರಿ ರಾಮಚಂದ್ರ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಮಂಜುನಾಥ್ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ತ್ಯಾಜ್ಯ ತುಂಬಿದ್ದ 20 ಲಾರಿಗಳನ್ನು ಸೀಜ್ ಮಾಡಿ ಮೈಸೂರು ಗ್ರಾಮಾಂತರ ಠಾಣೆ ಹಾಗೂ ಪಾಲಿಕೆ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.
ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಎಂಬ ಗುಮಾನಿ ಇದ್ದು, ಲಾರಿ ಚಾಲಕರುಗಳನ್ನು ಗ್ರಾಮಾಂತರ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮೈಸೂರು ನಗರಕ್ಕೆ ಸ್ವಚ್ಛತಾ ನಗರಿ ಎಂಬ ಹೆಸರು ಬಂದಿತ್ತು. ಇದೀಗ ಈ ಮಾಫಿಯಾದಿಂದ ಮೈಸೂರಿಗೆ ಕೆಟ್ಟ ಹೆಸರು ಬರಲಿದೆ ಎಂಬ ಆತಂಕ ಎದುರಾಗಿದೆ.