ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸ

ನವದೆಹಲಿ, ಜೂ.8- ನಾಳೆಯಿಂದ ಎರಡು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿ ಕುರಿತಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಶಾಂಘಾಯ್ ಕೋ-ಆಪರೇಷನ್ ಆರ್ಗನೈಸೇಷನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಪ್ರವಾಸ ಕೈಗೊಂಡಿರುವ ಮೋದಿ ಅವರು ಜಾಗತಿಕ ಭಯೋತ್ಪಾದನೆ ನಿಯಂತ್ರಣ ಹಾಗೂ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ವೃದ್ಧಿ ಮಾತುಕತೆಗೆ ಹೆಚ್ಚು ನೀಡಲಿದ್ದಾರೆ.
ಚೀನಾದ ವೂಹಾನ್ ಸಿಟಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಅಧ್ಯಕ್ಷ ಜಿನ್‍ಪಿಂಗ್ ಮತ್ತು ಮೋದಿ ಅವರು ಮುಖಾಮುಖಿ ಭೇಟಿಯಾಗಲಿದ್ದಾರೆ.
ಯೂರೋ ಏಷಿಯಾ ಪ್ರಾಂತ್ಯದಲ್ಲಿ ಶಾಂತಿ ಕಾಪಾಡುವುದು ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ 2001ರಲ್ಲಿ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ ಸ್ಥಾಪಿಸಲಾಗಿತ್ತು.
ರಷ್ಯಾ, ಚೀನಾ, ಖಜಕಿಸ್ತಾನ್, ಕಿರ್ಗೀಸ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳು ಈ ಆರ್ಗನೈಸೇಷನ್‍ನ ಸದಸ್ಯ ರಾಷ್ಟ್ರಗಳಾಗಿದ್ದು, ಕಳೆದ ವರ್ಷವಷ್ಟೇ ಭಾರತ ಮತ್ತು ಪಾಕಿಸ್ತಾನಕ್ಕೆ ಸದಸ್ಯತ್ವ ನೀಡಲಾಗಿತ್ತು.
ಮಾತುಕತೆ ಸಂದರ್ಭದಲ್ಲಿ ಭಾರತ, ಛಾಬಾರ್ ಯೋಜನೆಯ ಸಾಕಾರಕ್ಕೆ ಸಹಕರಿಸುವಂತೆ ಚೀನಾಗೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ