ಬೆಂಗಳೂರು, ಜೂ.6- ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಲಕ್ಷಾಂತರ ಕಿಲೋ ಮೀಟರ್ ನಡೆದಿರುವ ನಗರದ ಲಕ್ಷ್ಮಿನಾರಾಯಣಪುರ ನಿವಾಸಿಯಾದ ಇಂದ್ರಜಿತ್ ಎಂಬುವವರಿಗೆ ಬಿಡಿಎ ನಿಂದ ಹಂಚಿಕೆಯಾದ ನಿವೇಶನ ಕ್ರಯಪತ್ರವಾಗದೆ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರಿನ ಆರ್ಪಿಸಿ ಲೇಔಟ್ ಬಡಾವಣೆಯಲ್ಲಿ 90 40 ಅಳತೆಯ ನಿವೇಶನವನ್ನು ಬಿಡಿಎನವರು ನನ್ನ ಹೆಸರಿಗೆ ಸ್ವಾಧೀನ ಪತ್ರ ನೀಡಿರುತ್ತಾರೆ. ಆದರೆ, ಅದನ್ನು ಮೂಲ ಹಂಚಿಕೆದಾರರಿಗೆ ವಂಚಿಸಿ ಮೂರನೆ ಪಾರ್ಟಿ ಈರಮ್ಮ ಎಂಬುವವರಿಗೆ ಕ್ರಯಪತ್ರ ಮಾಡಿಕೊಟ್ಟಿದ್ದಾರೆ.
ನಾನು ಹಲವು ವರ್ಷಗಳಿಂದ ದೇಶ ಪರ್ಯಟನೆಯಲ್ಲಿದ್ದಾಗ ಈರಮ್ಮ ಎಂಬುವವರ ಹೆಸರಿಗೆ ಜಿಪಿಎ ಪತ್ರ ಕೊಟ್ಟು ಸುಳ್ಳು ದಾಖಲೆಗಳನ್ನು ಮಾಡಿ ಬಿಡಿಎನವರು ಅವರ ಹೆಸರಿಗೆ ಕ್ರಯ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿರುವ ಅವರು, ಮೂಲ ಹಂಚಿಕೆದಾರನಾದ ನನ್ನ ಹೆಸರಿಗೆ ಈ ನಿವೇಶನವನ್ನು ಕ್ರಯ ಮಾಡಿಕೊಟ್ಟರೆ ಸುಮಾರು 20 ಕೋಟಿ ಮೌಲ್ಯದ ಈ ಜಾಗವನ್ನು ನಾನು ಧರ್ಮಸ್ಥಳದ ಹೆಸರಿಗೆ ದಾನ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.