ಸ್ನೇಹಿತರ ಜತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ

ಆನೇಕಲ್, ಜೂ.5- ಸ್ನೇಹಿತರ ಜತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಳ್ಳೂರು ಗ್ರಾಮದಲ್ಲಿ ನಡೆದಿದೆ. ಬಿಹಾರ ಮೂಲದ ಅಜಿತ್‍ಕುಮಾರ್ (19) ಮೃತ ದುರ್ದೈವಿ.
ಅಜಿತ್‍ಕುಮಾರ್ ತಮಿಳುನಾಡಿನ ಟಿ.ವಿ.ಎಸ್. ಕಂಪನಿ ಬಳಿಯಿರುವ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಬಳ್ಳೂರು ಗ್ರಾಮದಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಅಜಿತ್ ಕುಮಾರ್ ಮತ್ತು ಇಬ್ಬರು ಸ್ನೇಹಿತರು ಬಳ್ಳೂರು ಕೆರೆಯಲ್ಲಿ ಈಜಲು ಹೋಗಿದ್ದು, ಈಜು ಬಾರದ ಕಾರಣ ಅಜಿತ್ ನೀರಿನಲ್ಲಿಯೇ ಮುಳುಗಿ ಸಾವನ್ನಪ್ಪಿದ್ದು, ಇನ್ನಿಬ್ಬರು ಈಜಿ ದಡ ಸೇರಿದ್ದಾರೆ.
ಕೆರೆಯಲ್ಲಿ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ತೆಗೆದ ಪರಿಣಾಮ ಆಳವಾಗಿದ್ದು, ಅಜಿತ್ ಶವಕ್ಕಾಗಿ ಪೆÇೀಲಿಸರು ಮತ್ತು ಅಗ್ನಿ ಶಾಮಕದಳವದವರು ತೀವ್ರ ಶೋಧ ನಡೆಸಿ ಶವ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ