ಭಾರೀ ಮಳೆಯಿಂದಾಗಿ ಭೂ ಕುಸಿತ: 10 ಮಂದಿ ಮೃತ

ಐಜ್ವಾಲ್, ಜೂ.5-ಭಾರೀ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ ಕಟ್ಟಡವೊಂದು ಉರುಳಿ 10 ಮಂದಿ ಮೃತಪಟ್ಟ ಘಟನೆ ಈಶಾನ್ಯ ರಾಜ್ಯ ಮಿಜೋರಾಂನ ಲುಂಗ್ಲೀ ಪಟ್ಟಣದಲ್ಲಿ ಸಂಭವಿಸಿದೆ.
ನಿನ್ನೆ ರಾತ್ರಿ ಲುಂಗ್ವಾನ್ ಪ್ರದೇಶದಲ್ಲಿ ಭಾರೀ ಮಳೆಯಾಗಿ ಲುಂಗ್ಲೀಯಲ್ಲಿ ಭೂಕುಸಿತ ಸಂಭವಿಸಿತು. ತತ್ಪರಿಣಾಮ ಕಟ್ಟಡ ಕುಸಿದು 10 ಮಂದಿ ಸಾವಿಗೀಡಾಗಿ ಅನೇಕರು ಗಾಯಗೊಂಡರು ಎಂದು ಪೆÇಲೀಸರು ತಿಳಿಸಿದ್ದಾರೆ.
ಲುಂಗ್ಲೀ ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯ ಸ್ವಯಂ ಕಾರ್ಯಕರ್ತರು ದುರಂತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ