ಬೆಂಗಳೂರು,ಫೆ.22-ದುಡ್ಡಿದ್ದರೂ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಯಿಂದ ಪಾರಾಗುವುದು ಎಷ್ಟು ದುಸ್ತರ ಎಂಬ ಪಾಠ ಕಲಿತ ನಾವು ಇಂತಹ ಸ್ಥಿತಿಯಲ್ಲಿ ಬಡಜನರ ಗತಿಯೇನು ಎಂದು ಆಲೋಚಿಸಿ ತಮ್ಮ ಮಗಳ ಹುಟ್ಟುಹಬ್ಬದಂದು ಸಂಪೂರ್ಣ ಉಚಿತ ಉತ್ಕøಷ್ಟ ದರ್ಜೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಬೆಂಗಳೂರು ಮೂಲದ ಮುಂಚೂಣಿ ಉದ್ಯಮಿ ವಿಜಯ್ ಟಾಟಾ ತಿಳಿಸಿದ್ದಾರೆ.
ತಮ್ಮ ಲಾಭರಹಿತ ಸಂಸ್ಥೆಯಾದ ನ್ಯೂ ಇಂಡಿಯಾದ ಮೊದಲ ಉಪಕ್ರಮವಾಗಿ ಬೆಂಗಳೂರಿನ ಅತ್ತಿಬೆಲೆ-ಆನೇಕಲ್ ರಸ್ತೆಯಲ್ಲಿರುವ 100 ಕೋಟಿ ಮೌಲ್ಯದ 50 ಎಕರೆ ಭೂಮಿ ಹಾಗೂ 100 ಕೋಟಿ ರೂ.ಗಳನ್ನು ಟ್ರಸ್ಟ್ಗೆ ನೀಡಿ ಲಾಂಛನ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದರು.
ತಮ್ಮ ಮಗಳು ಸಾಂಚಿ ಟಾಟ 6 ವರ್ಷದ ಹುಟ್ಟುಹಬ್ಬದ ನಿಮಿತ್ತ ಉಪಕ್ರಮ ಇಂದು ಕೈಗೊಂಡಿದ್ದು ನಮ್ಮ ಕುಟುಂಬದಲ್ಲೂ ಕ್ಯಾನ್ಸರ್ನಿಂದಾಗಿ ನನ್ನ ತಾಯಿ, ತಂಗಿ ಮತ್ತು ತಮ್ಮ ಸಾವನ್ನಪ್ಪಿದ್ದರು. ಇದರಿಂದ ಬಹಳಷ್ಟು ನೋವು ಅನುಭವಿಸಿದ್ದ ನಾವು ದುಡ್ಡಿನಲ್ಲಿ ಅವರನ್ನು ಉಳಿಸಿಕೊಳ್ಳಲಾಗಿರಲಿಲ್ಲ ಎಂದು ಮನದಾಳದ ನೋವು ಹಂಚಿಕೊಂಡರು.
ಇತ್ತೀಚೆಗೆ ತಮಗೆ ಅನಾರೋಗ್ಯವಾದಾಗ ಕೆಮ್ಮು ಕಾಣಿಸಿಕೊಂಡಿತ್ತು. ಈ ವೇಳೆ ಕ್ಯಾನ್ಸರ್ನ ಆತಂಕ ಉಂಟಾಗಿ ಕಂಗೆಡುವಂತಾಯ್ತು. ದುಡ್ಡಿದ್ದರೆ ಆಸ್ಪತ್ರೆಗಳಿಗೆ ಅಲೆದು ಕಾಯಿಲೆಗಳಿಂದ ಭಯ ಆವರಿಸುತ್ತದೆ ಇನ್ನು ಬಡಜನರ ಗತಿಯೇನು ಎಂದು ಆಲೋಚಿಸಿದೆ. ನಂತರ ಈ ವಿಚಾರವನ್ನು ತನ್ನ ಪತ್ನಿಯೊಂದಿಗೆ ಚರ್ಚಿಸಿ ಕ್ಯಾನ್ಸರ್ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ನಿರ್ಧರಿಸಿದೆ. ಅದರ ಮೊದಲ ಹಂತವಾಗಿ ಇಂದು ಭೂಮಿ ಹಾಗೂ ನಿಧಿಯನ್ನು ಅರ್ಪಿಸಿದ್ದು ನ್ಯೂ ಇಂಡಿಯ ಲಾಂಛನ ಬಿಡುಗಡೆ ಮಾಡುತ್ತಿದ್ದೇವೆ. ಡಿಸೆಂಬರ್ ವೇಳೆಗೆ ಆಸ್ಪತ್ರೆ ಆರಂಭಿಸುವ ಆಲೋಚನೆ ಇದೆ ಎಂದು ವಿವರಿಸಿದರು.
ಕ್ಯಾನ್ಸರ್ ರೋಗಿಗಳ ನೋವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನ್ಯೂ ಇಂಡಿಯಾ ಉಪಕ್ರಮದಿಂದ ಬಡ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದೆ ಎಂದ ಅವರು, ಕ್ಯಾನ್ಸರ್ ತಡೆಗಟ್ಟುವುದು ಹೇಗೆ ಅದರ ವಿಧಾನಗಳ ಬಗ್ಗೆಯೂ ಅರಿವು ಅಗತ್ಯವಿದೆ ಎಂದರು.
ವಿಜಯ್ ಟಾಟಾ ಅವರು ಕೈಗೊಂಡಿರುವ ಈ ಮಹತ್ವದ ಯೋಜನೆಗೆ ನಾವು ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇವೆ. ಅರಲ್ಲೂ ಇವರ ಈ ಉತ್ತಮ ಹೆಜ್ಜೆಗೆ ಅಭಿನಂದಿಸುವುದಾಗಿ ಹೇಳಿದರು.
ಅಮ್ರಿತಾ ಟಾಟಾ ಮಾತನಾಡಿ, ಬದಲಾವಣೆ ತರಲು ಮೊದಲು ನಾವು ಬದಲಾಗಬೇಕು. ಅದರಲ್ಲೂ ಸಮಾಜಕ್ಕೆ ನಾವು ಹಿಂದಿರುಗಿ ಕೊಡಬೇಕು. ಈ ನಿಟ್ಟಿನಲ್ಲಿ ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಅದರಲ್ಲೂ ಮಹಿಳೆಯರು, ಮಕ್ಕಳ ಗಂಭೀರ ಖಾಯಿಲೆಗಳಿಗೆ ಸೌಲಭ ಕಲ್ಪಿಸುವುದು, ಅತ್ಯಾಚರಕ್ಕೊಳಗಾದ ಸಂತ್ರಸ್ತರಿಗೆ ನೆರವಾಗುವುದು ನಮ್ಮ ಯೋಜನೆಯ ಅವಿಭಾಜ್ಯ ಅಂಗ ಎಂದು ತಿಳಿಸಿದರು.
ಫೋಟೋ: ಸಂಗ್ರಹ ಮಾತ್ರ