ತುಮಕೂರು ಮತ್ತಷ್ಟು ಸ್ಮಾರ್ಟ್‌: ಪೈಪ್ ಲೈನ್ ಮೂಲಕ ಬರಲಿದೆ ಅಡುಗೆ ಅನಿಲ..!

ತುಮಕೂರು: ತುಮಕೂರು ನಗರ ಇದೀಗ ಫುಲ್ ಸ್ಮಾರ್ಟ್ ಆಗ್ತಾ ಇದೆ. ಅದ್ರಲ್ಲೂ ನಗರದ ಗೃಹಿಣಿಯರಂತೂ ಫುಲ್ ಖುಷ್ ಆಗಿದ್ದಾರೆ. ಯಾಕಂದ್ರೆ ಅಡುಗೆ ಅನಿಲ ಸಿಲಿಂಡರ್‌‌ಗಾಗಿ ತಿಂಗಳುಗಟ್ಟಲೆ ಕಾಯುವ ಕಿರಿಕಿರಿ ದೂರವಾಗ್ತಿದೆ. ಅದೇಗೆ ಅಂತೀರಾ ಇಲ್ಲಿದೆ ನೋಡಿ….
ನಗರದಲ್ಲಿ ಮನೆಗಳಿಗೆ ಪೈಪ್‌ ಲೈನ್ ಮೂಲಕ  ಅಡುಗೆ ಅನಿಲ ಸರಬರಾಜು ಮಾಡುವ ಕೆಲಸ ಭರದಿಂದ ಸಾಗುತ್ತಿದೆ. ಸಪ್ತಗಿರಿ ಬಡಾವಣೆಯ 70 ಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಲೈನ್ ಗ್ಯಾಸ್‌‌ ಸಂಪರ್ಕವನ್ನು ಈಗಾಗಲೇ ಕಲ್ಪಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ತುಮಕೂರು ನಗರದ ಎಲ್ಲಾ ಮನೆಗಳಿಗೆ ಪೈಪ್ ಲೈನ್ ಸಂಪರ್ಕ ಲಭ್ಯವಾಗಲಿದೆ. ಹಾಗಾಗಿ ಸಿಲಿಂಡರ್‌‌‌ಗಳಿಗೆ ಗುಡ್ ಬೈ  ಹೇಳುವ  ಕಾಲ ಸನ್ನಿಹಿತವಾಗುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ಪ್ರತಿ ಮನೆಗೂ ಮೀಟರ್ ಅಳವಡಿಸಿ ಉಪಯೋಗಿಸಿ ಗ್ಯಾಸ್ ಬಳಕೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತದೆ. ಒಂದು ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್‌‌ಗೆ 23.10 ಪೈಸೆ ನಿಗದಿ ಮಾಡಲಾಗಿದ್ದು ಸಿಲಿಂಡರ್‌‌ ಗ್ಯಾಸ್‌‌ಗಿಂತ ಅಗ್ಗದ ದರದಲ್ಲಿ ಪೈಪ್ ಲೈನ್ ಗ್ಯಾಸ್ ಸಿಗುತ್ತಿದೆ. ಇನ್ನೊಂದೆಡೆ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸುವ ಯಾವುದೇ ಭಯ ಇಲ್ಲ. ಪ್ರತಿ ಒಂದು ಸಂಪರ್ಕಕ್ಕೆ ಠೇವಣಿಯಾಗಿ 5000 ರೂ. ನಿಗದಿ ಮಾಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ