ನವದೆಹಲಿ: ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ ರಾಷ್ಟ್ರಗಳ ಮಹತ್ವದ ಯಶಸ್ವಿ ಪ್ರವಾಸದ ನಂತರ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ನವದೆಹಲಿಗೆ ವಾಪಾಸ್ಸಾಗಿದ್ದಾರೆ.
ಮೂರು ರಾಷ್ಟ್ರಗಳಿಗೆ ಪ್ರಧಾನಿ ಭೇಟಿಯಿಂದಾಗಿ ಭಾರತದ ಪೂರ್ವ ರಾಷ್ಟ್ರಗಳ ನೀತಿಯಲ್ಲಿ ವೇಗ ಪಡೆದುಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟರ್ ನಲ್ಲಿ ಹೇಳಿದ್ದಾರೆ.
ಪ್ರಧಾನಿ ಭೇಟಿ ಸಂದರ್ಭದಲ್ಲಿ ಸಿಂಗಾಪುರದ ಪ್ರಧಾನಿ ಲೀ ಸೈಯಿನ್ ಲೂಂಗ್ ಅವರೊಂದಿಗೆ ವ್ಯಾಪಕವಾದ ಮಾತುಕತೆ ನಡೆಸಿದ್ದಾರೆ. ಶಾಂಘ್ರೈ ಲಾ ಸಮ್ಮೇಳನದಲ್ಲಿ ಏಷ್ಯಾದ ಮುಂಚೂಣಿ ರಾಷ್ಟ್ರಗಳಾದ ಭಾರತ ಹಾಗೂ ಚೀನಾದ ರಕ್ಷಣೆ ವ್ಯವಹಾರದ ಕಾರ್ಯತಂತ್ರ ಕುರಿತಂತೆ ಭಾಷಣ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರದಂದು ಸಮ್ಮೇಳನದಲ್ಲಿ ಮಾತನಾಡಿದ ಅವರು, ಪೈಪೋಟಿಯ ಏಷ್ಯಾ” ಈ ಪ್ರದೇಶವನ್ನು ಮತ್ತೆ ಹಿಡಿದಿಟ್ಟುಕೊಳ್ಳಲಿದೆ . ಏಷ್ಯಾ ರಾಷ್ಟ್ರಗಳ ಸಹಕಾರ ಪ್ರಸ್ತುತದ ಶತಮಾನವನ್ನು ಬದಲಾಯಿಸಲಿದೆ ಎಂದು ಹೇಳಿಕೆ ನೀಡಿದ್ದರು.