ಬೆಂಗಳೂರು, ಜೂ.2 ರಾಷ್ಟ್ರೀಯ ಶಿಕ್ಷಣ ಅಭಿಯಾನದ ಎರಡನೇ ಹಂತದ ಯೊಜನೆಯಡಿ ಸಂತ್ ಜೋಸೆಫ್ ಕಾಲೇಜಿಗೆ ಯುಜಿಸಿ ಮಾನ್ಯತೆ ದೊರೆತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ. ವಿಠ್ಠರ್ ಲೋಬೋ ತಿಳಿಸಿದರು.
ಸುದ್ಧಿಗೋಷ್ಠಿ ಮಾತನಾಡಿದ ಅವರು ಸ್ವಾಯಕ್ತ ಕಾಲೇಜುಗಳಿಗೆ ವಿಶ್ವವಿದ್ಯಾಲಯ ದರ್ಜೆಯ ಮಾನ್ಯತೆ ನೀಡುವ ಅವಕಾಶ ವಿರುವುದರಿಂದ ಎರಡನೆ ಹಂತದ ರಾಷ್ಟ್ರೀಯ ಶಿಕ್ಷಣ ಅಭಿಯಾನದಡಿ ಮಾನ್ಯತೆ ನೀಡುವಂತೆ ಏಪ್ರಿಲ್.2018 ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇಡೀ ದೇಶದಲ್ಲೇ 3 ಉತ್ಕøಷ್ಟ ಸಂಸ್ಥೆಗಳನ್ನು ಗುರುತಿಸಿ ಮಾನ್ಯತೆ ನೀಡಿರುವ ಪೈಕಿ ಸಂತ ಜೋಸೆಫ್ ಕಾಲೇಜು ಒಂದಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಅರ್ಹ ಉನ್ನತ ಶಿಕ್ಷಣ ಸಂಸ್ಥೆಗಳ ಉತ್ಕøಷ್ಟತೆಯ ಉನ್ನತಿಕರಣ ಕಾರ್ಯಕ್ಕೆ ತಾಂತ್ರಿಕ ನಿಧಿಯೊದಗಿಸುವ ಉದ್ದೇಶದಿಂದ ಕೇದ್ರ ಸರ್ಕಾರ ಈ ಯೋಜನೆಯನ್ನು ಅಸ್ತಿತ್ವಕ್ಕೆ ತಂದಿದ್ದು, ಇದರ ಯೋಜನೆಗಳು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಒಳಪಡಿಸುತ್ತವೆ.
ಒಂದನೆ ಹಂತದ ಯೋಜನೆಯಲ್ಲಿ ಸರ್ಕಾರಿ ಸ್ವಾಮ್ಯದ ಅನೇಕ ಶಿಕ್ಷಣ ಸಂಸ್ಥೆಗಳು ಪ್ರಯೊಜನ ಪಡೆದುಕೊಂಡಿವೆ.
ಶಿಕ್ಷಣ ಸಂಸ್ಥೆ ನಿರ್ವಾಹಣೆಯಲ್ಲಿ 137 ವರ್ಷಗ¼ ಅತ್ಯುನ್ಯತ ಇತಿಹಾಸ ಹೊಂದಿರುವ ಸಂತಜೋಸೆಫ್ ಕಾಲೇಜು ಯುಜಿಸಿ ವತಿಯಿಂದ ಕಾಲೇಜ್ ಎಕ್ಸ್‍ಲೆನ್ಸ್ ಎಂದು ಧೃಡಿಕೃತಗೊಂಡಿದೆ.
ನ್ಯಾಕ್ ಸಂಸ್ಥೆ ವತಿಯಿಂದ ನಡೆಸಲಾದ 4ನೇ ಸುತ್ತಿನ 2017ರ ಮೌಲ್ಯ ಮಾಪನದಲ್ಲಿ ಅಂಕಗಳಿಸಿ ದೇಶದಲ್ಲೆ ಅಗ್ರಸ್ಥಾನ ಪಡೆದಿದೆ ಪೆÇ್ರ.ಡಾ. ರಜಿನ್ ಮತ್ತಿತರರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.