ಬೆಂಗಳೂರು, ಏ.30-ಮನೆಯೊಂದರ ಬಳಿ ಬಂದ ಮೂವರು ವ್ಯಕ್ತಿಗಳು ಮಹಿಳೆಯೊಂದಿಗೆ ಜಗಳವಾಗಿ ಕಾಂಗ್ರೆಸ್ಅನ್ನು ಬೆಂಬಲಿಸಬೇಕೆಂದು ಧಮ್ಕಿ ಹಾಕಿರುವ ಘಟನೆ ಆಡುಗೋಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಂಬೇಡ್ಕರ್ ನಗರದ ಮನೆಯೊಂದರ ಬಳಿ ರಾತ್ರಿ 10 ಗಂಟೆ ಸಮಯದಲ್ಲಿ ಬಂದ ಮೂವರು, ನೀವು ಜೆಡಿಎಸ್ಗೆ ಬೆಂಬಲಿಸುತ್ತಿದ್ದೀರಾ ಎಂದು ಜಗಳವಾಡಿ, ಕಾಂಗ್ರೆಸ್ಗೆ ಮತ ಹಾಕುವಂತೆ ಬೆದರಿಸಿ ಹೋಗಿದ್ದರು. ಇದರಿಂದ ಗಾಬರಿಯಾದ ಮಹಿಳೆ ಆಡುಗೋಡಿ ಪೆÇಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೆÇಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈ ಮೂವರು ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಲಾಗಿದೆ.