ಬೆಂಗಳೂರು, ಏ.30- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ಪಾಕಿಸ್ತಾನದ ಕರಾಚಿಗೆ ತೆರಳಿದ್ದಾರೆ ಎಂದು ಫೇಕ್ ಫೆÇೀಟೋಶಾಪ್ ಮೂಲಕ ನಕಲಿ ದಾಖಲಿ ಸೃಷ್ಟಿಸಿ ಟ್ವಿಟ್ ಮಾಡಿರುವ ಗೌರವ್ ಪ್ರಧಾನ್ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ವಿಭಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಾ.10ರಂದು ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಜಮೀರ್ ಅಹಮ್ಮದ್ಖಾನ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರಾಚಿಗೆ ತೆರಳಿದ್ದಾರೆ ಎಂದು ಗೌರವ್ ಪ್ರಧಾನ್ ಟ್ವಿಟ್ ಮಾಡಿದ್ದರು. ಅಲ್ಲದೆ, ಕರಾಚಿಗೆ ತೆರಳಿದ್ದ ತಾವು ಐಎಸ್ಐ ನಂಟು ಬೆಳೆಸಲು ತೆರಳಿದ್ದೀರಾ. ಇದಕ್ಕೆ ರಾಹುಲ್ ಉತ್ತರಿಸಬಹುದೆ ಎಂದು ಟ್ವಿಟ್ನಲ್ಲಿ ಪ್ರಶ್ನಿಸಿದ್ದರು.
ಬೆಂಗಳೂರಿನ ಎಚ್ಎಎಲ್ ಮೂಲಕ ವಿಎಸ್ಆರ್ ವೆಂಚರ್ ಪ್ರೈ.ಲಿ. ಟ್ರಾವೆಲ್ಸ್ನಲ್ಲಿ ಕರಾಚಿಗೆ ತೆರಳಿದ್ದರು ಎಂದು ಗೃಹ ಇಲಾಖೆಯ ಡಿಜಿಸಿಎ ನಿಂದ ಪಡೆದ ದಾಖಲೆ ಎಂದು ಖಚಿತಪಡಿಸಿದ್ದರು.
ಇವರ ಟ್ವಿಟ್ಗೆ ಬಿಜೆಪಿಯ ಶಿಲ್ಪಾ ಗಣೇಶ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದರು. ಚುನಾವಣಾ ಸಂದರ್ಭದಲ್ಲಿ ಗೌರವ್ ಪ್ರಧಾನ್ ಅವರು ನಕಲಿ ಫೆÇೀಟೋಶಾಪ್ ಬಳಸಿ ಮಾಡಿದ ಈ ಕೃತ್ಯ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಿಜೆಪಿಯವರ ಇಂತಹ ಸುಳ್ಳು ವದಂತಿಯಿಂದ ಜನರಲ್ಲಿ ತಪ್ಪು ಭಾವನೆ ಮೂಡುತ್ತದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ದೂರಿನಲ್ಲಿ ಆಗ್ರಹಿಸಿದೆ.