ಸುಳ್ಯ: ರಾಜ್ಯದ ಕರಾವಳಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಕಲ್ಕುಂದದಲ್ಲಿ ನಡೆದ ಬಿಜೆಪಿ ನವಶಕ್ತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಷ್ಟಾಚಾರ ಮತ್ತು ಗೂಂಡಾವರ್ತನೆ ಮಿತಿಮೀರಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಸಮೀಪಿಸಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಅಂತೆಯೇ ಕಲ್ಕುಂದ ಕ್ಷೇತ್ರ ಸಂಘಟನಾ ಶಕ್ತಿಗೆ ಹೆರುವಾಸಿ. 1980ರಲ್ಲೇ ಕಲ್ಕುಂದ ಬಗ್ಗೆ ಜಗನ್ನಾಥ್ ಮಿಶ್ರಾ ಕೊಂಡಾಡಿದ್ದರು ಎಂದು ಶಾ ತಿಳಿಸಿದರು.