* ನಂಜುಂಡಸ್ವಾಮಿ ಅವರಂತೆಯೇ ಪುಟ್ಟಣ್ಣಯ್ಯ ಕೂಡ ರೈತರ ಪರವಾಗಿ ಹೋರಾಟ ನಡೆಸಿದವರು. ಅವರ ಕಷ್ಟ-ಸುಖಗಳ ಬಗ್ಗೆ ಸದನದಲ್ಲಿ ದನಿ ಎತ್ತಿದ್ದವರು -ಕಾನೂನು ಸಚಿವ ಟಿ.ಬಿ.ಜಯಚಂದ್ರ
* ರೈತಪರ ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ನಾಯಕನೊಬ್ಬನನ್ನು ಈ ನಾಡು ಕಳೆದುಕೊಂಡಂತಾಗಿದೆ. ರೈತರ ಹೋರಾಟಕ್ಕೆ ಅವರ ಕೊಡುಗೆ ಅದಮ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್
* ರೈತಪರ ಹೋರಾಟಗಾರ, ಶಾಸಕ ಶ್ರೀ ಕೆ ಎಸ್ ಪುಟ್ಟಣ್ಣಯ್ಯನವರ ಹಠಾತ್ ನಿಧನರಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ತಮ್ಮ ರೈತ ಹೋರಾಟಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದ್ದರು – ಮಾಜಿ ಮುಖ್ಯಮಂತ್ರಿಗಳು ಮತ್ತು ಬಜಪ ರಾಜ್ಯಾಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ
* ರೈತರಿಗಾಗಿ ಹೋರಾಡಿದ ರೈತ ಮಿತ್ರನನ್ನು ನಮ್ಮ ನಾಡು ಕಳೆದುಕೊಂಡಿದೆ. ಇದು ನಮ್ಮ ಮನಸ್ಸಿಗೆ ಬಹಳ ನೋವುಂಟು ಮಾಡಿದೆ ಎಂದು ವಿಷಾಧಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ದೇವರು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಾರ್ಥಿಸಿದ್ದಾರೆ
* ನನ್ನ ಮತ್ತು ಪುಟ್ಟಣ್ಣಯ್ಯ ಅವರ ಒಡನಾಟ ಸುಮಾರು 35 ವರ್ಷಗಳದ್ದು, 80ರ ದಶಕದಲ್ಲಿ ರೈತ ಚಳವಳಿ, ಗೋಕಾಕ್ ಚಳವಳಿಗಳು ಅತ್ಯಂತ ಸದೃಢವಾಗಿದ್ದವು. ಎಸ್.ಡಿ.ಜಯರಾಂ ಅವರ ಗರಡಿಯಲ್ಲಿ ಪಳಗಿದ ಪುಟ್ಟಣ್ಣಯ್ಯ ಅವರು ಸಕ್ರಿಯವಾಗಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. – ಡಿಎಸ್‍ನ ಉಪನಾಯಕ ವೈ.ಎಸ್.ವಿ.ದತ್ತಾ
* ಮಂಡ್ಯ ಜಿಲ್ಲೆಯ ಯಾವುದೇ ಸಮಸ್ಯೆಗಳಿದ್ದರೂ ಪುಟ್ಟಣ್ಣಯ್ಯ ಅವರು ಉತ್ತರ ಕಂಡು ಹಿಡಿಯುವುದರಲ್ಲಿ ಹೆಚ್ಚು ಬದ್ಧತೆ ತೋರಿಸುತ್ತಿದ್ದರು. ಎಲ್ಲಾ ಜನಪ್ರತಿನಿಧಿಗಳ ಜತೆ ಚರ್ಚೆ ಮಾಡಿ ಪರಿಹಾರ ಕಂಡು ಹಿಡಿಯುವುದು ಅವರ ಕಾರ್ಯಶೈಲಿಯಾಗಿತ್ತು. ಅಪ್ರತಿಮನಾಯಕ, ಪ್ರಾಮಾಣಿಕ ವ್ಯಕ್ತಿ ಎಂದು ಹಿರಿಯ ಶಾಸಕ ಚಲುವರಾಯಸ್ವಾಮಿ ಕೊಂಡಾಡಿದರು.
* ವಿದೇಶಿ ಪ್ರವಾಸ ಮಾಡಿ ಬಂದ ಪುಟ್ಟಣ್ಣಯ್ಯ ಅವರು ಅಲ್ಲಿನ ವೈಜ್ಞಾನಿಕ ಕೃಷಿ ಪದ್ಧತಿಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದರು. ವಾಸಿಸುವವನೇ ನೆಲೆದೊಡೆಯ ಎಂಬ ಮಸೂದೆ ಅನುಮೋದನೆಗೊಳ್ಳುವಾಗ ಪುಟ್ಟಣ್ಣಯ್ಯ ಅವರು ಧ್ವನಿಗೂಡಿಸಿದ್ದು ಮರೆಯುವಂತಿಲ್ಲ ಎಂದು ಶಾಸಕ ಶಿವಮೂರ್ತಿ ನಾಯಕ್ ಹೇಳಿದರು.
* ಪುಟ್ಟಣ್ಣಯ್ಯ ನಾಡಿನ ರೈತರ ಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಚಳವಳಿಯಿಂದ ರೂಪುಗೊಂಡವರಿಗೆ ಅಂತಃಕರಣವಿರುತ್ತದೆ ಎಂಬುದಕ್ಕೆ ಪುಟ್ಟಣ್ಣಯ್ಯ ಉದಾಹರಣೆ. ಮೋಜಿಗಾಗಿ ಅವರು ವಿದೇಶಿ ಪ್ರವಾಸ ಮಾಡುತ್ತಿರಲಿಲ್ಲ. ಅಧ್ಯಯನಕ್ಕಾಗಿ ಹೋಗುತ್ತಿದ್ದರು – ಜೆಪಿಯ ವಿಶ್ವೇಶ್ವರಹೆಗಡೆ
* ಪುಟ್ಟಣ್ಣಯ್ಯ ಯಾರನ್ನೂ ಟೀಕಿಸದೆ, ಅಸೂಹೆ ಪಡೆದೆ, ರಾಜಕಾರಣ ಮಾಡದೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ಕೃಷಿಗೆ ಸಂಬಂಧಪಟ್ಟಂತೆ ನೇರ ಹಾಗೂ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಕೃಷಿ ಉದ್ದಾರವಾಗದೆ ದೇಶ ಉದ್ದಾರವಾಗಲ್ಲ ಎಂಬುದು ಅವರ ವಾದವಾಗಿತ್ತು. ಕೇವಲ ಮಂಡ್ಯಕಷ್ಟೇ ನಾಯಕರಾಗಿರದೆ ರೈತರು, ರಾಜ್ಯ ಹಾಗೂ ದೇಶದ ಧೀಮಂತ ನಾಯಕರಾಗಿದ್ದರು – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್
* ಶಾಸಕ ಅಶೋಕ್‍ಖೇಣಿ ಪುಟ್ಟಣ್ಣಯ್ಯ ಸ್ಮರಣಾರ್ಥ ಪುತ್ಥಳಿ ನಿರ್ಮಿಸುವಂತೆ ಮನವಿ ಮಾಡಿದರು.