ಮೈಸೂರು, ಏ.28- ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್ಸ್)ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 1.32 ಲಕ್ಷ ಬಾಟಲ್ ಅಳಿಸಲಾಗದ ಶಾಹಿಯನ್ನು ಪೂರೈಸಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಮೈಲ್ಯಾಕ್ ಅಳಿಸಲಾಗದ ಶಾಹಿಯನ್ನು ಪೂರೈಕೆ ಮಾಡಿದೆ. ಇದರೊಂದಿಗೆ ಸಂಸ್ಥೆಯ 1.66 ಕೋಟಿ ರೂ. ವಹಿವಾಟು ನಡೆಸಿದೆ.
ಒಂದು ಬಾಟಲ್ನಲ್ಲಿ 10 ಎಂ.ಎಲ್ನಷ್ಟು ಶಾಹಿಯಿರುತ್ತದೆ. ಒಂದು ಬಾಟಲ್ಗೆ 125 ರೂ.ಗಳಂತೆ ನಿಗದಿ ಮಾಡಲಾಗಿದೆ.
ಕಳೆದ ಚುನಾವಣೆಯಲ್ಲಿ 1.10 ಲಕ್ಷ ಶಾಹಿಯನ್ನು ಪೂರೈಸಲಾಗಿತ್ತು. ಆಗ ಒಂದು ಬಾಟಲ್ಗೆ 142 ರೂ. ನಿಗದಿ ಮಾಡಲಾಗಿತ್ತು. ಇದೀಗ ಉತ್ಪಾದನಾ ವೆಚ್ಚ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಒಂದು ಬಾಟಲ್ಗೆ 126 ರೂ. ನಿಗದಿಪಡಿಸಲಾಗಿದೆ ಎಂದು ಮೈಲ್ಯಾಕ್ ಅಧ್ಯಕ್ಷ ವೆಂಕಟೇಶ್ ವಿವರಿಸಿದ್ದಾರೆ.