ಗುಂಟೂರು, ಏ.28-ನೀರು ತುಂಬಿಕೊಂಡಿದ್ದ ಭವನ ಕಟ್ಟಡ ನಿರ್ಮಾಣದ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದೊಂಡಪಾಡು ಗ್ರಾಮದಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ಏಳು ಮಕ್ಕಳನ್ನು ರಕ್ಷಿಸಲಾಗಿದೆ.
ಅಮಲಾ(9), ದಿನೇಶ್(8) ಮತ್ತು ಸಾತ್ವಿಕ್(9) ಮೃತಪಟ್ಟ ದುರ್ದೈವಿ ಮಕ್ಕಳು.
ದೊಂಡಪಾಡು ಗ್ರಾಮದಲ್ಲಿ ಭವನ ನಿರ್ಮಾಣಕ್ಕಾಗಿ ಅಡಿಪಾಯ ತೊಡಲಾಗಿತ್ತು. ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು.
ಹತ್ತು ಮಕ್ಕಳು ಈ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದರು. ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾದರು. ಸ್ಥಳೀಯರು ಏಳು ಮಕ್ಕಳನ್ನು ರಕ್ಷಿಸಿದರು.
ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.