ರಾಯ್‍ಪುರ್, ಏ.28-ಛತ್ತೀಸ್‍ಗಢದ ಮಾವೋವಾದಿಗಳ ಪ್ರಾಬಲ್ಯವಿರುವ ಸುಕ್ಮಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳಾ ನಕ್ಸಲ್ ಬಲಿಯಾಗಿದ್ದಾಳೆ.
ಸುಕ್ಮಾಗೆ ಹೊಂದಿಕೊಂಡಿರುವ ಬಿಜಾಪುರ ಜಿಲ್ಲೆಯಲ್ಲಿ ನಿನ್ನೆ ನಡೆದ ಎನ್‍ಕೌಂಟರ್‍ನಲ್ಲಿ ಆರು ಮಹಿಳೆಯರೂ ಸೇರಿದಂತೆ ಎಂಟು ಮಾವೋವಾದಿ ಬಂಡುಕೋರರು ಹತರಾದ ಬೆನ್ನಲ್ಲೇ ಮತ್ತೊಂದು ಗುಂಡಿನ ಕಾಳಗ ನಡೆದಿದೆ.
ಸುಕ್ಮಾ ಜಿಲ್ಲೆಯ ಬುರ್ಕಾಪಲ್ ಪ್ರದೇಶದ ಅರಣ್ಯದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಈವರೆಗೆ ಮಹಿಳಾ ನಕ್ಸಲ್ ಹತಳಾಗಿದ್ದಾಳೆ ಎಂದು ಜಂಟಿ ಕಾರ್ಯಪಡೆ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸ್‍ಗಢ-ಮಹಾರಾಷ್ಟ್ರ-ತೆಲಂಗಾಣ ಜಿಲ್ಲೆಗಳ ಗಡಿ ಭಾಗದಲ್ಲಿ ಕಳೆದ ಒಂದು ವಾರದಿಂದ ಜಂಟಿ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಈವರೆಗೆ 45 ನಕ್ಸಲರು ಹತರಾಗಿದ್ದಾರೆ.