ಬೆಂಗಳೂರು,ಏ.26-ಭಾರತೀಯ ಮಾನವ ವಸಾಹತುಗಳ ಸಂಸ್ಥೆ ಅರ್ಬನ್ ಲೆನ್ಸ್ ಚಲನಚಿತ್ರೋತ್ಸವದ 5ನೇ ಆವೃತಿಯನ್ನು ನಗರದಲ್ಲಿ ಸೆ.20-23ರಂದು ಮತ್ತು ನವದೆಹಲಿಯಲ್ಲಿ ನವೆಂಬರ್ 16-18ರಂದು ಆಯೋಜಿಸಲಾಗಿದೆ.
ಚಿತ್ರೋತ್ಸವದ ಭಾಗವಾಗಿ, ಆಯ್ದ ಚಿತ್ರಗಳನ್ನು ಮುಂಬೈನಲ್ಲಿ ಗೋದ್ರೇಜ್ ಇಂಡಿಯಾಕಲ್ಚರ್ ಲ್ಯಾಬ್ನ ಸಹಯೋಗದೊಂದಿಗೆ ಪ್ರದರ್ಶಿಸಲಾಗುತ್ತದೆ. ಚಿತ್ರೋತ್ಸವಕ್ಕೆ ಪ್ರವೇಶಗಳನ್ನು ಆಹ್ವಾನಿಸಲಾಗುತ್ತಿದ್ದು, ನಿಮ್ಮ ಚಿತ್ರವು ನಗರದ ಚಿಂತನೆಯ ಬಗೆಗಿದ್ದು, ನಗರದಲ್ಲಿನ ಸಮಸ್ಯೆ, ವಿಚಾರಗಳನ್ನು ಪ್ರಶ್ನಿಸುವಂತಿರಬೇಕು.
ಎಲ್ಲ ರೀತಿಯ ಚಿತ್ರಗಳು ಅಂದರೆ ಅನಿಮೇಷನ್,ಫಿಕ್ಷನ್, ಕಿರು ಫಿಕ್ಷನ್ /ಫೀಚರ್ ಫಿಕ್ಷನ್ ಮತ್ತು ಪ್ರಯೋಗಾತ್ಮಕ ಚಿತ್ರಗಳು ಚಿತ್ರೋತ್ಸವದಲ್ಲಿ ಭಾಗವಹಿಸಲು ಅರ್ಹತೆ ಹೊಂದಿದೆ. ಪ್ರವೇಶ ನಮೂನೆ www.iihs.co.in/urbanlens ನಲ್ಲಿ ಲಭ್ಯವಿದ್ದು, ಯಾವುದೇ ಶುಲ್ಕ ಪ್ರವೇಶವಿರುವುದಿಲ್ಲ. ಜೂ.15ರೊಳಗೆ ವೆಬ್ಸೈಟ್ urbanlens@iihs.ac.in ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗೆ ದೂ: 8067606666 ಸಂಪರ್ಕಿಸಬಹುದು.