ಲೂಧಿಯಾನ, ಏ.26-ಪಂಜಾಬ್ನ ಲೂಧಿಯಾನದ ಗಿಯಾಸ್ಪುರ ಪ್ರದೇಶದ ಕಾರ್ಮಿಕರ ಕಾಲೋನಿಯಲ್ಲಿ ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 26 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವರಲ್ಲಿ ಐವರ ಸ್ಥಿತಿ ಶೋಚನೀಯವಾಗಿದೆ.
ಸ್ಮಾರ್ಟ್ ಕಾಲೋನಿಯ ಅಶೋಕ್ ಕುಮಾರ್ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ಗೆ ಬೆಂಕಿ ಹೊತ್ತಿಕೊಂಡಿತು. ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ಅಗ್ನಿ ಶಮನಕ್ಕಾಗಿ ಯತ್ನಿಸುತ್ತಿದ್ದಾಗ, ಅದು ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿತು. ಈ ದುರ್ಘಟನೆಯಲ್ಲಿ 26 ಮಂದಿ ತೀವ್ರ ಗಾಯಗೊಂಡರು ಎಂದು ಪೆÇಲೀಸ್ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಫೋಟದ ತೀವ್ರತೆಗೆ ಕಟ್ಟಡದ ಒಂದು ಭಾಗ ಕುಸಿದಿದೆ.