ಕತುವಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣ: ನ್ಯಾಯಸಮ್ಮತ ವಿಚಾರಣೆ ನಡೆಯುವ ಬಗ್ಗೆ ಸುಪ್ರೀಂಕೋರ್ಟ್ ಅನುಮಾನ

ನವದೆಹಲಿ, ಏ.26-ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ಕಾಶ್ಮೀರದ ಕತುವಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯುವ ಬಗ್ಗೆ ಸುಪ್ರೀಂಕೋರ್ಟ್ ಇಂದು ಅನುಮಾನ ವ್ಯಕ್ತಪಡಿಸಿದೆ.
ಕತುವಾ ಜಿಲ್ಲೆಯ ವಕೀಲರು ಈ ಪ್ರಕರಣದ ಬಗ್ಗೆ ಪರ ಮತ್ತು ವಿರೋಧ ನಿಲುವು ಹೊಂದಿರುವುದರಿಂದ ಈ ಪ್ರಕರಣದಲ್ಲಿ ಕೆಳಹಂತದ ಕೋರ್ಟ್‍ಗಳಲ್ಲಿ ನ್ಯಾಯಸಮತ್ಮ ವಿಚಾರಣೆ ನಡೆಯುವುದು ವಾಸ್ತವ ಕಳವಳಕ್ಕೆ ಕಾರಣ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಸಮ್ಮತ ವಿಚಾರಣೆಯಲ್ಲಿ ಸ್ವಲ್ಪ ಕೊರತೆ ಸಾಧ್ಯತೆ ಕಂಡು ಬಂದರೆ, ಈ ಪ್ರಕರಣವನ್ನು ಕತುವಾದಿಂದ ಹೊರಗೆ ವರ್ಗಾವಣೆ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವ ಪೀಠವು ಹೇಳಿದೆ.
ಸಂತ್ರಸ್ತರ ಕುಟುಂಬ ಮತ್ತು ಆರೋಪಿಗಳ ವಿಚಾರಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕು. ಇ ಈ ಪ್ರಕರಣದಲ್ಲಿ ಯಾವುದೇ ಪೂರ್ವಗ್ರಹಕ್ಕೆ ಒಳಗಾಗಬಾರದು ಎಂದು ಪೀಠವು ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ