ಶಹಜಾನ್‍ಪುರ್(ಉತ್ತರಪ್ರದೇಶ), ಏ.25-ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾದಿತ-ಸ್ವಘೋಷಿತ ದೇವಮಾನವ ಅಸಾರಾಂನನ್ನು ಜೋಧ್‍ಪುರ್ ನ್ಯಾಯಾಲಯ ದೋಷಿ ಎಂದು ಘೋಷಿಸಿರುವುದಕ್ಕೆ ಸಂತ್ರಸ್ತೆಯ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ನ್ಯಾಯಾಂಗ ಮತ್ತು ಮಾಧ್ಯಮಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ತೀರ್ಪು ಪ್ರಕಟವಾಗುತ್ತಿದ್ದಂತೆ ಉತ್ತರಪ್ರದೇಶದ ಶಹಜಾನ್‍ಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು ನಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ನಮಗೆ ನ್ಯಾಯ ಲಭಿಸಿರುವುದಕ್ಕೆ ಸಂತಸವಾಗಿದೆ ಎಂದರು.
ನಾವು ಕಳೆದ ನಾಲ್ಕು ತಿಂಗಳಿನಿಂದ ಭಯ ಮತ್ತು ಆತಂಕದ ವಾತಾವರಣದಲ್ಲಿದ್ದೇವೆ. ಕುಟುಂಬದ ಸದಸ್ಯರು ಮನೆಯಿಂದ ಹೊರಬಂದಿಲ. ನಮ್ಮ ವ್ಯಾಪಾರ-ವಹಿವಾಟಿಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದರು.