ಕುಣಿಗಲ್, ಏ.24- ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಿ.ಕೃಷ್ಣಕುಮಾರ್ ಉಮೇದುವಾರಿಕೆ ಸಲ್ಲಿಸಿದರು.
ಕ್ಷೇತ್ರದಲ್ಲಿ ಕಳೆದ ತಿಂಗಳಿಂದ ಬಿಜೆಪಿ ಬಿ ಫಾರಂ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಗೊಂದಲ ಉಂಟಾಗಿದ್ದು, ಕೊನೆಗೂ ಟಿಕೆಟ್ ಕೃಷ್ಣಕುಮಾರ್ ಅವರಿಗೆ ಸಿಕ್ಕಿದೆ. ಟಿಕೆಟ್ಗಾಗಿ ಕೆಂಪೇಗೌಡ ಸೇವಾ ಟ್ರಸ್ಟ್ನ ರಾಜ್ಯ ಉಪಾಧ್ಯಕ್ಷ ರಾಜೇಶ್ಗೌಡ ಅವರು ರಾಷ್ಟ್ರಮಟ್ಟದ ಬಿಜೆಪಿ ಮುಖಂಡರ ಬಳಿ ಟಿಕೆಟ್ಗಾಗಿ ಲಾಬಿ ನಡೆಸಿದರು. ಇದರಿಂದಾಗಿ ಬಿಜೆಪಿಯ ಎರಡು ಪಟ್ಟಿಗಳು ಘೋಷಣೆಯಾದರೂ ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಘೋಷಣೆ ಮಾಡಿರಲಿಲ್ಲ.
ಇದರಿಂದಾಗಿ ಟಿಕೆಟ್ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಕೊನೆಗೂ ಬಿ ಫಾರಂ ಡಿ.ಕೃಷ್ಣಕುಮಾರ್ ಕೈ ತಲುಪಿದ್ದು, ಸಾವಿರಾರು ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಮಂದೆ ಮಾರಮ್ಮನ ದೇವಾಲಯದಿಂದ ಮೆರವಣಿಗೆ ಮುಖಾಂತರ ಬಂದು ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಜಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖವಾಗಿದ್ದು, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಸಂಬಂಧಿಕಯಾಗಿದ್ದರಿಂದ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇವರಿಗೆ ಈ ಕ್ಷೇತ್ರದ ಬಗ್ಗೆ ಕಿಂಚಿತ್ತೂ ಸಹ ಅರಿವು ಇಲ್ಲ. ಕೇವಲ ಇಲ್ಲಿನ ಗಣಿ ಸಂಪತ್ತನ್ನು ಲೂಟಿ ಮಾಡಲು ಹುನ್ನಾರ ನಡೆಸಿದ್ದು, ಹಣಬಲದಿಂದ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆ. ಆದ್ದರಿಂದ ಕುಣಿಗಲ್ನ ಸ್ವಾಭಿಮಾನದ ಮತದಾರರು ಎಚ್ಚೆತ್ತುಕೊಂಡು ಕನಕಪುರದ ನಾಯಕರುಗಳಿಗೆ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕೆಂದು ಕರೆ ನೀಡಿದರು.
ಇನ್ನುಳಿದಂತೆ ಕ್ಷೇತ್ರದ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಮತ ಯಾಚನೆ ಮಾಡದೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒಂದು ಅಂಶದ ಕಾರ್ಯಕ್ರಮದಡಿ ಮತಯಾಚಿಸುತ್ತಿದ್ದಾರೆ ಎಂದು ಟೀಕಿಸಿದರು.
ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ಗೌಡ, ವಿಜಯಲಕ್ಷ್ಮಿ, ಡಿ.ಕೃಷ್ಣಕುಮಾರ್, ದರ್ಶನ್ಗೌಡ ಮತ್ತಿತರರು ಉಪಸ್ಥಿತರಿದ್ದರು.