ಹೈದರಾಬಾದ್, ಏ.22-ಬಾರತ ಕಮ್ಯೂನಿಸ್ಟ್ ಪಕ್ಷದ(ಮಾರ್ಕ್‍ವಾದಿ) ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಇಂದು ಪುನರಾಯ್ಕೆ ಆಗಿದ್ದಾರೆ. ಮುತ್ತಿನನಗರಿ ಹೈದರಾಬಾದ್‍ನಲ್ಲಿ ಇಂದು ಪಕ್ಷದ ಹೊಸ ಕೇಂದ್ರೀಯ ಸಮಿತಿ ಯೆಚೂರಿ ಅವರನ್ನು ಎರಡನೇ ಅವಧಿಗೆ ಸರ್ವಸಮ್ಮತದಿಂದ ಆಯ್ಕೆ ಮಾಡಿತು. ಇವರ ಅಧಿಕಾರಾವಧಿ ಮೂರು ವರ್ಷಗಳು.
ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಅವರು ಈ ಉನ್ನತ ಹುದ್ದೆಗೆ ಬೇರೊಬ್ಬ ಅಭ್ಯರ್ಥಿ ಪರ ಒಲವು ಹೊಂದಿದ್ದಾರೆಂಬ ಊಹಾಪೆÇೀಹಾಗಳಿಗೆ ತೆರೆ ಬಿದ್ದಿವೆ.
ಸೀತಾರಾಂ ಯೆಚೂರಿ ಅವರು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ ಎಂದು ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ.
ಇಂದು ಬೆಳಗೆ ನಡೆದ ಪಾಲಿಟ್ ಬ್ಯೂರೋ ಸಭೆ ನೂತನ ಕೇಂದ್ರೀಯ ಸಮಿತಿಯನ್ನು ರಚಿಸಿತು. ಈ ಸಮಿತಿಯು ಯೆಚೂರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿತು.
ಈ ಹಿಂದೆ ಯೆಚೂರಿ ಮತ್ತು ಕಾರಟ್ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದು, ಮುಂದಿನ ಸಿಪಿಎಂ ಪ್ರಧಾನ ಕಾರ್ಯದರ್ಶಿ ನೇಮಕದ ಬಗ್ಗೆ ಗೊಂದಲ ಮತ್ತು ಊಹಾಪೆÇೀಹಗಳು ಹಬ್ಬಿದ್ದವು.