ಛತ್ತೀಸ್‍ಗಢದ ನಕ್ಸಲರ ಹಾವಳಿ: ಅಧಿಕಾರಿ ಹುತಾತ್ಮ

ರಾಯ್‍ಪುರ್, ಏ.21-ಛತ್ತೀಸ್‍ಗಢದ ನಕ್ಸಲರ ಹಾವಳಿ ಪೀಡಿತ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮಾವೋವಾದಿಗಳ ಜೊತೆ ನಿನ್ನೆ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಕೇಂದ್ರ ಮೀಸಲು ಪೆÇಲೀಸ್ ಪಡೆ(ಸಿಆರ್‍ಪಿಎಫ್)ಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.
ಸಿಆರ್‍ಪಿಎಫ್‍ನ 212ನೇ ಬೆಟಾಲಿಯನ್ ತಂಡ ಕಿಸ್ತಾರಾಂ ಪೆÇಲೀಸ್ ಠಾಣೆ ವ್ಯಾಪ್ತಿಯ ಕಾನನ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ಗನ್‍ಫೈಟ್ ನಡೆಯಿತು ಎಂದು ಉಪ ಪೆÇಲೀಸ್ ಮಹಾ ನಿರೀಕ್ಷಕ (ದಕ್ಷಣ ಬಸ್ತರ್ ವಲಯ) ಪಿ. ಸುಂದರ್‍ರಾಜ್ ಇಂದು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಸಹಾಯಕ ಸವ್ ಇನ್ಸ್‍ಪೆಕ್ಟರ್ (ಎಎಸ್‍ಐ) ಅನಿಲ್ ಕುಮಾರ್ ಮೌರ್ಯ ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೌರ್ಯ ಮಧ್ಯಪ್ರದೇಶದವರು.
ಛತ್ತೀಸ್‍ಗಢ ರಾಜಧಾನಿ ರಾಯ್‍ಪುರದಿಂದ 500 ಕಿ.ಮೀ. ದೂರದ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದ ನಂತರ ನಕ್ಸಲರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ