ಸಹಾಯ ಕೇಳುವ ನೆಪದಲ್ಲಿ ಕ್ಯಾಂಟರ್ ಚಾಲಕನ ಬಳಿ ಬಂದ ದರೋಡೆಕೋರ ಮೊಬೈಲ್ ಪಡೆದುಕೊಂಡು ಪರಾರಿಯಾ

ಬೆಂಗಳೂರು, ಏ.20-ಸಹಾಯ ಕೇಳುವ ನೆಪದಲ್ಲಿ ಕ್ಯಾಂಟರ್ ಚಾಲಕನ ಬಳಿ ಬಂದ ದರೋಡೆಕೋರ ಮೊಬೈಲ್ ಪಡೆದುಕೊಂಡು ಪರಾರಿಯಾಗಿರುವ ಘಟನೆ ಕೆ.ಎಸ್.ಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಮುಂಜಾನೆ 3.30ರಲ್ಲಿ ಕ್ಯಾಂಟರ್ ಚಲಾಯಿಸಿಕೊಂಡು ಚಾಲಕ ಇಮ್ರಾನ್ ಎಂಬುವರು ಇಲಿಯಾಸ್ ನಗರದ ಬಳಿ ಬಂದಿದ್ದು, ಪೆಟ್ರೋಲ್ ಖಾಲಿಯಾದ ಪರಿಣಾಮ ಸಮೀಪದ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಲು ವಾಹನ ನಿಲ್ಲಿಸಿಕೊಂಡು ನಿಂತಿದ್ದರು.

ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ದರೋಡೆಕೋರ, ನನ್ನ ಕೈಗೆ ಗಾಯವಾಗಿ ರಕ್ತ ಬರುತ್ತಿದೆ. ಮನೆಗೆ ಫೆÇೀನ್ ಮಾಡಬೇಕು. ನನ್ನ ಬಳಿ ಮೊಬೈಲ್ ಇಲ್ಲ. ನಿಮ್ಮ ಮೊಬೈಲ್ ಕೊಡಿ ಎಂದು ಕೇಳಿದ್ದಾನೆ.
ಈತನ ಮಾತನ್ನು ನಂಬಿದ ಇಮ್ರಾನ್ ತಮ್ಮ ಮೊಬೈಲ್‍ನ್ನು ಕೊಟ್ಟಾಗ ದರೋಡೆಕೋರ ಅಲ್ಲಿಂದ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ತದನಂತರ ತಾನು ಮೋಸ ಹೋಗಿರುವುದನ್ನು ಅರಿತ ಇಮ್ರಾನ್ ಕೆ.ಎಸ್.ಲೇಔಟ್ ಠಾಣೆಗೆ ದೂರು ನೀಡಿದ್ದು, ನನ್ನ ಮೊಬೈಲ್‍ನ ಪೌಚ್‍ನಲ್ಲಿ 15 ಸಾವಿರ ಹಣ ಇಟ್ಟಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ದರೋಡೆಕೋರನಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ