ಬೆಂಗಳೂರು, ಏ.20-ದೇವನಹಳ್ಳಿ ಚೆಕ್ಪೆÇೀಸ್ಟ್ವೊಂದರ ಬಳಿ ಮೊನ್ನೆ ರಾತ್ರಿ ಕೆಪಿಎನ್ ಸಂಸ್ಥೆಗೆ ಸೇರಿದ ಖಾಸಗಿ ಬಸ್ಸೊಂದರಲ್ಲಿ ಹಣ ಪತ್ತೆಯಾದ ಬೆನ್ನಲ್ಲೇ ನಿನ್ನೆ ರಾತ್ರಿ ಮತ್ತೆ ಅದೇ ಸಂಸ್ಥೆಗೆ ಸೇರಿದ ಹೈದರಾಬಾದ್ನಿಂದ ಬರುತ್ತಿದ್ದ ಬಸ್ನಲ್ಲಿ ಸಾಗಿಸುತ್ತಿದ್ದ 52.91 ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ಹಾಗೂ ಪೆÇಲೀಸರು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ವಿಚಾರಣೆಗೊಳಪಡಿಸಿದ್ದಾರೆ.
ರಾತ್ರಿ ಹೈದರಾಬಾದ್ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಪಿಎನ್ ಸಂಸ್ಥೆಗೆ ಸೇರಿದ ಬಸ್ಸನ್ನು ದೇವನಹಳ್ಳಿ ಬಳಿಯ ರಾಣಿ ಸರ್ಕಲ್ ಬಳಿ ನಿರ್ಮಿಸಲಾಗಿರುವ ಚುನಾವಣಾ ಚೆಕ್ಪೆÇೀಸ್ಟ್ ಬಳಿ ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಎರಡು ಬ್ಯಾಗ್ಗಳಲ್ಲಿ ಒಟ್ಟು 52.91 ಲಕ್ಷ ರೂ. ಪತ್ತೆಯಾಗಿದೆ. ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಹಣವನ್ನು ವಶಪಡಿಸಿಕೊಂಡು ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ.
ಈ ಸಂಬಂಧ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊನ್ನೆ ರಾತ್ರಿ ಇದೇ ಮಾರ್ಗವಾಗಿ ಬಂದ ಕೆಪಿಎನ್ ಸಂಸ್ಥೆಗೆ ಸೇರಿದ ಬಸ್ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ರಾತ್ರಿ 52.91 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮೊನ್ನೆ ರಾತ್ರಿ ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕತ್ರಿಗುಪ್ಪೆ ಬಳಿ ವಶಪಡಿಸಿಕೊಂಡಿರುವ 10 ಲಕ್ಷ ರೂ. ಹಣಕ್ಕೆ ದಾಖಲೆಗಳಿರುವುದು ತಿಳಿದುಬಂದಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.