ಬೆಂಗಳೂರು,ಏ.20- ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ನಿನ್ನೆ ಶಿರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ತಮ್ಮ ಒಟ್ಟು ಆಸ್ತಿ ಮೌಲ್ಯ 19.10 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.
2013ರ ಚುನಾವಣೆಯಲ್ಲಿ ತಮ್ಮ ಕುಟುಂಬದ ಆದಾಯ 12431835 ಕೋಟಿ ಇದ್ದು, 3,04,62,298 ಕೋಟಿ ಸಾಲ ಇದೆ ಎಂದು ಘೋಷಿಸಿಕೊಂಡಿದ್ದರು. ಈ ಬಾರಿ ಒಟ್ಟು ಆದಾಯ 19.10 ಕೋಟಿ. ಇದರಲ್ಲಿ 01,53,00,985 ರೂ. ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ.
19.10 ಕೋಟಿ ಆದಾಯದಲ್ಲಿ 12 ಕೋಟಿ ಜಯಚಂದ್ರ ಅವರಿಗೆ ಸೇರಿದ್ದು, ಉಳಿದ 7.10 ಕೋಟಿ ಅವರ ಪತ್ನಿಗೆ ಸೇರಿದ್ದಾಗಿದೆ. ಈ ಸಾಲಿನ ಚರಾಸ್ತಿ ಜಯಚಂದ್ರ ಅವರ ಹೆಸರಿನಲ್ಲಿ 10592204.96 ಕೋಟಿ ಇದ್ದರೆ, ಅವರ ಪತ್ನಿ ಚರಾಸ್ತಿ 2444973.62 ಕೋಟಿ ಇದೆ. ಜಯಚಂದ್ರ ಅವರ ಹೆಸರಿನಲ್ಲಿ 152194 ರೂ. ನಗದು ರೂಪದಲ್ಲಿದೆ. ಅವರ ಪತ್ನಿ ಹೆಸರಿನಲ್ಲಿ 49228 ರೂ. ಇದೆ.
ಜಯಚಂದ್ರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇರುವ ಠೇವಣಿ ಮೊತ್ತ 489700, ಪತ್ನಿ ಹೆಸರಿನಲ್ಲಿ 1.39 ಲಕ್ಷ ಇದೆ. ಜಯಚಂದ್ರ ಹೆಸರಿನಲ್ಲಿ ಟಾಟಾ ಅರಿಯಾ ಕಾರು (ಮೌಲ್ಯ 5 ಲಕ್ಷ), ಮತ್ತೊಂದು ಕಾರು ಫಾರ್ಚೂನರ್ ಕಾರು (ಮೌಲ್ಯ 35.39 ಲಕ್ಷ) ಹೊಂದಿದ್ದಾರೆ.