ಪತ್ನಿಯನ್ನು ಕೊಂದು ಹಾಕಿದ ಪತಿಯೊಬ್ಬ ಮೃತದೇಹವನ್ನು 11 ಭಾಗಗಳಾಗಿ ಕತ್ತರಿಸಿದ್ದಾನೆ:

ಸೂರತ್, ಏ.18-ಪತ್ನಿಯನ್ನು ಕೊಂದು ಹಾಕಿದ ಪತಿಯೊಬ್ಬ ಮೃತದೇಹವನ್ನು 11 ಭಾಗಗಳಾಗಿ ಕತ್ತರಿಸಿರುವ ಭೀಕರ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.
ಶಹನವಾಜ್ ಶೇಖ್ ತನ್ನ ಪತ್ನಿ ಜುಲೇಕಾ ಎಂಬಾಕೆಯನ್ನು ಹತ್ಯೆ ಮಾಡಿ, ನಂತರ ತುಂಡರಿಸಿದ ವಿವಿಧ ಭಾಗಗಳನ್ನು ಚೀಲದಲ್ಲಿ ತುರುಕಿ ಎಸೆಯುತ್ತಿದ್ದ ಸಂದರ್ಭದಲ್ಲೇ ಪೆÇಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಶಹನವಾಜ್ ತನ್ನ ಮೊದಲ ಪತ್ನಿ ಮತ್ತು ಎರಡನೇ ಹೆಂಡತಿ ಜುಲೇಕಾ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದ. ಇಬ್ಬರು ಪತ್ನಿಯರ ನಡುವೆ ಆಗಾಗ ಜಗಳವಾಗುತ್ತಿತ್ತು. ಇದನ್ನು ಕೊನೆಗಾಣಿಸಲು ತಾನು ಜುಲೇಕಾಳನ್ನು ಕೊಂದಿದ್ದಾಗಿ ಶೇಖ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಎಸಿಪಿ ಠಕ್ಕರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ