ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖ್ಯಾತ ನಟಿ ರಮ್ಯಾ ವಾಗ್ದಾಳಿ :

ನವದೆಹಲಿ, ಏ.18-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖ್ಯಾತ ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡದ ಮುಖ್ಯಸ್ಥೆ ರಮ್ಯಾ ವಾಗ್ದಾಳಿ ಮುಂದುವರಿಸಿದ್ದಾರೆ.
ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಬಿಜೆಪಿಗೆ ಸಾಮಾಜಿಕ ಜಾಲ ತಾಣದ ಅಗತ್ಯವಿಲ್ಲ. ಏಕೆಂದರೆ ಅಂಥ ನಕಲಿ ಸುದ್ದಿ-ಸಮಾಚಾರಗಳನ್ನು ಹರಡಲು ಅವರ ಬಳಿ ಪ್ರಧಾನಿ ನರೇಂದ್ರ ಮೋದಿಯೇ ಇದ್ದಾರೆ ಎಂದು ದಿವ್ಯ ಸ್ಪಂದನ (ರಮ್ಯಾ) ಲೇವಡಿ ಮಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಥಾ ಪ್ರಕಾರ ಮೋದಿ ವಿರುದ್ಧ ಹರಿಹಾಯ್ದ ರಮ್ಯಾ, ಪಾಕಿಸ್ತಾನದ ಜೊತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಂಟು ಹೊಂದಿದ್ದಾರೆ ಎಂಬ ಪ್ರಧಾನಮಂತ್ರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಆರೋಪ ನಿರಾಧಾರ. ಇದೊಂದು ಅಪಪ್ರಚಾರ ಮಾಡುವ ಕುತಂತ್ರ ಎಂದಿರುವ ರಮ್ಯಾ, ಬಿಜೆಪಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದೇ ಕೆಲಸ. ಅದಕ್ಕಾಗಿ ಕೇಸರಿ ಪಕ್ಷಕ್ಕೆ ಸೋಷಿಯಲ್ ಮೀಡಿಯಾ ಏಕೆ ಬೇಕು. ಇಂಥ ಕೆಲಸ ಮಾಡಲು ಅವರ ಬಳಿ ಪ್ರಧಾನಿಯೇ ಇದ್ದಾರೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ