ನವದೆಹಲಿ, ಏ.18-ಕರ್ನಾಟಕ ವಿಧಾನಸಭೆ ಚುನಾವಣೆ ರಣರಂಗವಾಗಿದ್ದು, ಕದನ ಕೌತುಕ ಕೆರಳಿಸಿದೆ. ಕಾಂಗ್ರೆಸ್ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಪ್ರಸ್ತಕ ಚುನಾವಣಾ ಕಣದ ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.
ಮೇ 12ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆಯಾದರೂ ಪ್ರತಿಯೊಂದು ಸ್ಥಾನಕ್ಕೂ ಕಣದಲ್ಲಿರುವ ಮೂರು ಪಕ್ಷಗಳ ನಡುವೆ ಪ್ರಬಲ ಹೋರಾಟ ನಡೆಯಲಿದೆ ಎಂದು ಮೊಯ್ಲಿ ವಾರ್ತಾ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಚುನಾವಣೆ ನಂತರ ಜಾತ್ಯಾತೀತ ಜನತಾದಳದ(ಜೆಡಿಎಸ್) ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯಸಾಧ್ಯತೆಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಚುನಾವಣೆ ಒಂದು ಸಮರವಿದ್ದಂತೆ. ಚುನಾವಣೆಯಲ್ಲಿ ಯಾವುದೂ ಸುಲಭವಲ್ಲ. ಚುನಾವಣೆ ಮತ್ತು ಯುದ್ಧ ಎರಡೂ ಒಂದೆ. ಇವೆರಡರಲ್ಲೂ ಹೋರಾಟ ಅನಿವಾರ್ಯ. ನಾವು ಗೆಲ್ಲುವ ವಿಶ್ವಾಸವಿದ್ದರೂ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ನಾವು ಹೋರಾಡಬೇಕಾದ ಪರಿಸ್ಥಿತಿ ಇದೆ ಎಂದು ಮೊಯ್ಲಿ ವಿಶ್ಲೇಷಿಸಿದ್ದಾರೆ.
ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಕಳಂಕಿತ ಗಣಿಧಣಿ ಜಿ. ಜನಾರ್ದನಾ ರೆಡ್ಡಿ ಅವರ ಹಿರಿಯ ಸಹೋದರನನ್ನು ಚುನಾವಣಾ ಕಣಕ್ಕೆ ಇಳಿಸಿರುವ ಬಿಜೆಪಿ ಧೋರಣೆ ಖಂಡಿಸಿರುವ ಮೊಯ್ಲಿ, ಇದು ಕೇಸರಿ ಪಕ್ಷದ ಅಸ್ಥಿರತೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಹೊರಹೊಮ್ಮುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕಳೆದ ಐದು ವರ್ಷಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಸಾಧನೆ ಉತ್ತಮವಾಗಿದೆ. ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುವ ಯಾವುದೇ ವಿವಾದಗಳಿಲ್ಲ. ಚುನಾವಣೆ ನಂತರ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸದು ಎಂದು ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ. ಅವರು ಎಲ್ಲ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಚುನಾವಣೆಯಲ್ಲಿ ಮೋದಿ ಗಿಮಿಕ್ ನಡೆಯುವುದಿಲ್ಲ ಎಂದು ಅವರು ಪ್ರಶ್ನೆಂiÉ
ೂಂದಕ್ಕೆ ಉತ್ತರಿಸಿದ್ದಾರೆ.