ನವದೆಹಲಿ, ಏ.16-ಏರ್‍ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಹಾಗೂ ಉದ್ಯಮಿ ಕಾರ್ತಿ ಚಿದಂಬರಂ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವ ಅವಧಿಯನ್ನು ದೆಹಲಿ ನ್ಯಾಯಾಲಯವೊಂದು ಮೇ 2ರವರೆಗೆ ವಿಸ್ತರಣೆ ಮಾಡಿದೆ.
2-ಜಿ ಸ್ಪೆಕ್ಟ್ರಂ ಪ್ರಕರಣಗಳಲ್ಲಿ ಥಳುಕು ಹಾಕಿಕೊಂಡಿರುವ ಎರ್‍ಸೆಲ್-ಮ್ಯಾಕ್ಸಿಸ್ ವಿಷಯದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ(ಇಡಿ) ಇವುಗಳಿಂದ ಸಲ್ಲಿಸಲಾಗಿದ್ದ ಎರಡು ಪ್ರಕರಣಗಳ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಒ.ಪ.ಸೈನಿ ಕಾರ್ತಿ ಬಂಧನ ರಕ್ಷಣೆ ಅವಧಿಯನ್ನು ಮೇ 2ರವರೆಗೆ ವಿಸ್ತರಿಸಿದರು.
ನಿರೀಕ್ಷಣಾ ಜಾಮೀನು ಕೋರಿ ಕಾರ್ತಿ ಸಲ್ಲಿಸಲಾಗಿರುವ ಅರ್ಜಿ ವಿಚಾರದಲ್ಲಿ ವಾದ ಮಂಡಿಸಲು ಸಮಯಾವಕಾಶ ನೀಡಬೇಕೆಂದು ಇಡಿ ಪರ ವಕೀಲರ ಮನವಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾರ್ತಿಗೆ ರಿಲೀಫ್ ದೊರೆತಿದೆ.