ಢಾಕಾ: ಆರು ಅಂತಸ್ತಿನ ಪಾನೀಯ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 52 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಢಾಕಾ ಹೊರವಲಯ ನಾರಾಯಣಗಂಜ್ನ ರೂಪ್ಗಂಜ್ನಲ್ಲಿನ ಶೆಜಾನ್ ಪಾನೀಯ ತಯಾರಿಕಾ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5ಗಂಟೆಗೆ ದುರಂತ ಸಂಭವಿಸಿದೆ. ಕಟ್ಟಡದ ನೆಲ ಮಾಳಿಗೆಯಿಂದ ಹೊತ್ತಿಕೊಂಡ ಬೆಂಕಿ, ಕಟ್ಟಡದಲ್ಲಿ ರಾಸಾಯನಿಕ ಮತ್ತು ಪ್ಲ್ಯಾಸ್ಟಿಕ್ ಬಾಟಲಿಗಳಿದ್ದುದರಿಂದ ಕ್ಷಿಪ್ರವಾಗಿ ಹರಡಿತು ಎಂದು ಅಗ್ನಿ ಶಾಮಕ ದಳದ ಅಕಾರಿಗಳು ತಿಳಿಸಿದ್ದಾರೆ.
ಬೆಂಕಿ ಅನಾಹುತದಲ್ಲಿ 52 ಮಂದಿ ಸಾವಿಗೀಡಾಗಿದ್ದು, ಇತರೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಂಕಿ ಹರಡುತ್ತಿರುವುದು ತಿಳಿಯುತ್ತಿದ್ದಂತೆಯೇ ಕೆಲ ಕಾರ್ಮಿಕರು ಕಟ್ಟಡದಿಂದ ಹೊರ ನೆಗೆದಿದ್ದಾರೆ ಎಂದು ಅಕಾರಿಗಳು ಹೇಳಿದ್ದಾರೆ.