ಮಾಸ್ಕೋ: ಯುದ್ಧ ಪೀಡಿತ ಅಫ್ಘಾನಿಸ್ಥಾನದಿಂದ ಅಮೆರಿಕ ಪಡೆಗಳು ಹಿಂದೆ ಸರಿದ ಬಳಿಕ ಇರಾನ್‍ನೊಂದಿಗಿನ ಪ್ರಮುಖ ಗಡಿ ಸೇರಿ ಆ ರಾಷ್ಟ್ರದ ಶೇ.85 ಪ್ರದೇಶದಲ್ಲಿ ಹಿಡಿತ ಸಾಸಿರುವುದಾಗಿ ತಾಲಿಬಾನ್ ಶುಕ್ರವಾರ ತಿಳಿಸಿದೆ.
ಅಫ್ಘಾನಿಸ್ಥಾನದಿಂದ ಅಮೆರಿಕ ರಕ್ಷಣಾ ಪಡೆಯನ್ನು ಹಿಂಪಡೆಯುವುದಾಗಿ ಅಧ್ಯಕ್ಷ ಜೋ ಬೈಡನ್ ಘೋಷಿಸುತ್ತಿದ್ದಂತೆಯೇ, ಗಡಿಯ ಇಸ್ಲಾಂ ಖಾಲ ಪಟ್ಟಣವನ್ನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿದೆ.
ಅಲ್ಲದೆ, ಅಫ್ಘಾನಿಸ್ಥಾನದ 398 ಜಿಲ್ಲೆಗಳಲ್ಲಿ 250ರ ಮೇಲೆ ನಿಯಂತ್ರಣ ಸಾಸಿರುವುದಾಗಿ ಮಾಸ್ಕೋದಲ್ಲಿ ತಾಲಿಬಾನ್ ಅಧಿಕಾರಿಗಳ ನಿಯೋಗ ತಿಳಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಬಗ್ಗೆ ಸರ್ಕಾರ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಗಡಿ ಭಾಗದಲ್ಲಿನ ಇಸ್ಲಾಂ ಖಾಲ ಪಟ್ಟಣ ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿದೆ ಎಂದು ತಾಲಿಬಾನ್ ವಕ್ತಾರ ಜಬೀಉಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಇದೇ ವೇಳೆ ಸರ್ಕಾರದ ಅಧಿಕಾರಿಗಳು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಹೋರಾಟ ಮುಂದುವರಿದಿದೆ ಎಂದಿದ್ದಾರೆ.