
ಅಮರಾವತಿ: ಆಂಧ್ರಪ್ರದೇಶದಲ್ಲಿ ಹಿಂದೂ ದೇವತೆಗಳ ವಿಗ್ರಹ ಹಾನಿಗೊಳಿಸುವ ದುಷ್ಕøತ್ಯ ಮುಂದುವರಿದಿದ್ದು, ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಈ ನಡುವೆ ವಿಜಯವಾಡದಲ್ಲಿರುವ ಸೀತಾ ದೇವಿಯ ವಿಗ್ರಹವನ್ನೂ ಭಗ್ನಗೊಳಿಸಲಾಗಿದೆ.
ಭಾನುವಾರ ಬೆಳಗ್ಗೆ ಅರ್ಚಕರು ದೇಗುಲಕ್ಕೆ ಆಗಮಿಸಿದಾಗ, ವಿಗ್ರಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಕೂಡ ದೇಗುಲಕ್ಕೆ ಭೇಟಿ ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಪಡೆದಿದ್ದಾರೆ. ಘಟನೆ ಕುರಿತಂತೆ ಎಲ್ಲ ಆಯಾಮದಿಂದಲೂ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದೆ. ಜತೆಗೆ ವಿಗ್ರಹಕ್ಕೆ ಹಾನಿ ಮಾಡಲಾಗಿದ್ದರೂ, ದೇಗುಲದ ದ್ವಾರಕ್ಕೆ ಹಾಕಿದ ಬೀಗ ಮುರಿದಿರಲಿಲ್ಲ. ಹಾಗಾಗಿ ಯಾರೋ ಮಂದಿರಕ್ಕೆ ಸಂಬಂಸಿದವರೇ ವಿಗ್ರಹ ಹಾನಿಗೊಳಿಸಲು ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ.
ವಿಜಯವಾಡದ ಪಂಡಿತ್ ನೆಹರೂ ಬಸ್ ನಿಲ್ದಾಣದ ಬಳಿಯಿರುವ ಸೀತಾ ಮಂದಿರದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ, ಟಿಡಿಪಿ ಸದಸ್ಯರು ಸೇರಿದಂತೆ ಹಲವು ಹಿಂದೂ ಸಂಘಟನೆಗಳು ದುಷ್ಕøತ್ಯ ಖಂಡಿಸಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಮಂದಿರ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜಗನ್ ಆಡಳಿತದಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿಗೆ ಕನಿಷ್ಠ ಭದ್ರತೆಯು ಇಲ್ಲ. ಜತೆಗೆ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ, ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಬೇಜವಾಬ್ದಾರಿ ಮೆರೆಯುತ್ತಿದೆ ಎಂದು ಟಿಡಿಪಿ ನಾಯಕ ಬುದ್ಧ ವೆಂಕಣ್ಣ ತಿಳಿಸಿದ್ದಾರೆ.