ಶ್ರೀನಗರ :2001ರಲ್ಲಿ ಫಾರೂಕ್ ಅಬ್ದುಲ್ಲಾ ಅಕಾರವಯಲ್ಲಿ ಜಾರಿಗೆ ತಂದಿದ್ದ ರೋಶ್ನಿ ಯೋಜನೆಯ ಮೂಲಕ ಅಕ್ರಮವಾಗಿ ಕಬಳಿಸಿರುವ 17 ಸಾವಿರ ಹೆಕ್ಟೇರ್ ಭೂಮಿಯನ್ನು ಜಮ್ಮು-ಕಾಶ್ಮೀರಕ್ಕೆ ವಾಪಸ್ ಸಿಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ವಿಶ್ವಾಸ ತಿಳಿಸಿದ್ದಾರೆ.
ಜತೆಗೆ ಯೋಜನೆ ಅನ್ವಯ ಭ್ರಷ್ಟಾಚಾರದಲ್ಲಿ ತೊಡಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ರೋಶ್ನಿ ಕಾಯ್ದೆಯನ್ನು ಹೈ ಕೋರ್ಟ್ ರದ್ದುಗೊಳಿಸಿದ್ದಲ್ಲದೆ, ಇದೊಂದು ಅಸಾಂವಿಧಾನಿಕ, ಕಾನೂನುಬಾಹಿರ ಕಾಯ್ದೆ ಎಂತಲೂ ತಿಳಿಸಿತ್ತು.
ಇದರಿಂದ ಕಾಯ್ದೆ ಜಾರಿಗೊಳಿಸಿದ್ದೆ ಶ್ರೀಮಂತರು, ರಾಜಕೀಯ ವ್ಯಕ್ತಿಗಳು, ಅಕಾರಶಾಹಿಗಳು ಭೂಮಿ ಕಬಳಿಸಲು ಸಹಾಯಾವಗಲಿ ಎಂಬ ಉದ್ದೇಶಕ್ಕೆ ಎಂಬುದು ಸಾಬೀತಾಗಿದೆ. ಈ ಸಂಬಂಸಿದಂತೆ ಸೂಕ್ತ ತನಿಖೆಗೆ ನ್ಯಾಯಾಲಯದ ಆದೇಶಿಸಿರುವುದು ಸ್ವಾಗತಾರ್ಹ ಎಂದು ಠಾಕೂರ್ ಹೇಳಿದ್ದಾರೆ.
ಈ ಮೂಲಕ 17,000 ಹೆಕ್ಟೇರ್ ಭೂಮಿಯನ್ನು ಕಣಿವೆ ಪ್ರದೇಶ ವಾಪಸ್ ಸಿಗುವುದರ ಬಗ್ಗೆ ವಿಶ್ವಾಸ ಮೂಡಿದ್ದು, ಅಕ್ರಮದಲ್ಲಿ ಭಾಗಿಯಾದವರಿಗೂ ತಕ್ಕ ಶಿಕ್ಷೆ ಸಿಗಲಿದೆ ಎಂದಿದ್ದಾರೆ.