ಬೆಂಗಳೂರು: ಡಿಜಿಟಲ್ ಇಂಡಿಯಾ ಕೇವಲ ಯೋಜನೆಯಾಗಿರದೆ ಪ್ರತಿಯೊಬ್ಬರ ಬದುಕಿನ ಭಾಗವಾಗಿದ್ದು ದಶಕಗಳಿಂದ ಆಗದೇ ಇದ್ದ ಡಿಜಿಟಲ್ನ ವಿಕಾಸ ಕಳೆದ ಕೆಲವು ತಿಂಗಳುಗಳಲ್ಲಿ ಆಗಿದೆ. ನಾವು ಇಂದು ಮಾಹಿತಿ ಯುಗದಲ್ಲಿದ್ದು ಹಲವು ಆಯಾಮಗಳಲ್ಲಿ ಸಾಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ, ಕರ್ನಾಟಕ ಸರ್ಕಾರದ ಮಾಹಿತಿ ತಂತ್ರ, ಜೈವಿಕ ತಂತ್ರ ಮತ್ತು ನವೋದ್ಯಮ ಇಲಾಖೆ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಜಂಟಿಯಾಗಿ ಹಮ್ಮಿಕೊಂಡಿರುವ ಮೂರು ದಿನದ ಟೆಕ್ ಸಮ್ಮಿಟ್ಗೆ ಆನ್ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಡಿಜಿಟಲ್ ಮತ್ತು ತಂತ್ರಜ್ಞಾನ ಪರಿಹಾರಗಳಿಗೆ ದೊಡ್ಡ ಮಾರುಕಟ್ಟೆ ಒದಗಿಸಿದೆ. ತಂತ್ರಜ್ಞಾನವನ್ನು ಇಂದು ಎಲ್ಲಾ ಯೋಜನೆಗಳ ಭಾಗವನ್ನಾಗಿ ಮಾಡಲಾಗಿದ್ದು ಆಡಳಿತ ವಲಯದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ನಾವು ಮಾದರಿಯಾಗಿದ್ದೇವೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೇವಲ ಒಂದು ಕ್ಲಿಕ್ನಲ್ಲಿ ಗ್ರಾಮೀಣ ಭಾಗದ ಹಾಗೂ ರೈತರಿಗೆ ಹಣಕಾಸು ಸೌಲಭ್ಯ ಸಿಗುವಂತೆ ಮಾಡಲಾಗಿದೆ. ಇದರರ್ಥ ದೇಶದಲ್ಲಿ ರೈತರು, ಬಡವರು, ಕಟ್ಟಕಡೆಯ ವ್ಯಕ್ತಿಯೂ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ದೇಶದ ಎಲ್ಲಾ ವರ್ಗದ ಜನರ ಜೀವನ ಶೈಲಿಯನ್ನು ಬದಲಿಸಿದೆ ಎಂದರು.
ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ತಂತ್ರಜ್ಞಾನದಿಂದ ದೇಶದ ಯಾವುದೇ ಭಾಗದಲ್ಲಿದ್ದರೂ ಆರೋಗ್ಯ ಸೇವೆ ಸಿಗುವಂತಾಗಿದೆ. ಕಟ್ಟುನಿಟ್ಟಾದ ಲಾಕ್ ಡೌನ್ ಸಂದರ್ಭದಲ್ಲಿಯೂ ತಂತ್ರ ಭಾರತದ ಬಡವರು ಸೂಕ್ತ ಮತ್ತು ತ್ವರಿತ ನೆರವು ಪಡೆಯಲು ಸಾಧ್ಯವಾಯಿತು ಎಂದರು.
ಕಡಿಮೆ ಅವಯಲ್ಲಿ ಲಸಿಕೆ ಹಾಕುವ ವಿಶ್ವಾಸ
ಸೇವೆಗಳ ಉತ್ತಮ ವಿತರಣೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಡೇಟಾ ವಿಶ್ಲೇಷಣೆಯನ್ನು ಸರ್ಕಾರ ಬಳಸಿಕೊಂಡಿದೆ. ನಮ್ಮ ಯೋಜನೆಗಳು ಕಡತಗಳನ್ನು ಮೀರಿ, ಜನಜೀವನವನ್ನು ಇಷ್ಟೊಂದು ತ್ವರಿತಗತಿಯಲ್ಲಿ ಮತ್ತು ಪ್ರಮಾಣದಲ್ಲಿ ಬದಲಾಯಿಸಲು ತಂತ್ರ ಪ್ರಮುಖ ಕಾರಣ. ತಂತ್ರ ನಾವು ಎಲ್ಲರಿಗೂ ವಿದ್ಯುತ್ ಒದಗಿಸಲು ಸಾಧ್ಯವಾಗಿದೆ, ಟೋಲ್ಗಳನ್ನು ವೇಗವಾಗಿ ದಾಟುತ್ತಿದ್ದೇವೆ, ಕಡಿಮೆ ಅವಯಲ್ಲಿ ಹೆಚ್ಚು ಜನರಿಗೆ ಲಸಿಕೆ ಹಾಕುವ ವಿಶ್ವಾಸವನ್ನು ತಂತ್ರಜ್ಞಾನ ನೀಡಿದೆ ಎಂದರು.
ಕೋವಿಡ್ನಿಂದ ತಂತ್ರಜ್ಞಾನ ಬಳಕೆ ಹೆಚ್ಚಳ
ಸಾಂಕ್ರಾಮಿಕ ಸಮಯದಲ್ಲಿ ತಂತ್ರ ಕ್ಷೇತ್ರವು ತನ್ನ ಇರುವಿಕೆಯನ್ನು ಪರಿಣಾಮಕಾರಿಯಾಗಿ ತೋರಿಸಿದೆ. ಒಂದು ದಶಕದಲ್ಲಿ ಆಗಿರದ ತಂತ್ರ ಅಳವಡಿಕೆಯು ಕೆಲವೇ ತಿಂಗಳುಗಳಲ್ಲಿ ಸಂಭವಿಸಿದೆ. ಕೊರೋನಾ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುವ ಸವಾಲು ಇದ್ದು ಈಗ ಎಲ್ಲಿಂದಲಾದರೂ ಕೆಲಸ ಮಾಡು ಎಂಬ ಹೊಸ ನೀತಿಯನ್ನು ಜಾರಿಗೆ ತಂದಿದ್ದೇವೆ. ಇದು ಮುಂದೆಯೂ ಮುಂದುವರಿಯಲಿದೆ. ಶಿಕ್ಷಣ, ಆರೋಗ್ಯ, ಶಾಪಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ತಂತ್ರ ಅಳವಡಿಕೆ ಕಂಡುಬರುತ್ತಿದೆ. ಯುಪಿಐ, ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್, ಸ್ವಾಮಿತ್ವ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಸಾಮಾನ್ಯರನ್ನೂ ತಲುಪುತ್ತಿದೆ ಎಂದರು.