ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು: ಬ್ರಿಕ್ಸ್ ಶೃಂಗದಲ್ಲಿ ಪ್ರಧಾನಿ ಮೋದಿ ತಾಕೀತು

ನವದೆಹಲಿ/ ಮಾಸ್ಕೋ: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಬ್ರಿಕ್ಸ್ ಒಕ್ಕೂಟದ 12ನೇ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರನ್ಸ್ ಮೂಲಕ ಭಾಷಣ ಮಾಡಿದರು.
2021ಕ್ಕೆ ಬ್ರಿಕ್ಸ್ ಒಕ್ಕೂಟ 15 ವರ್ಷಗಳನ್ನು ಪೂರ್ಣಗೊಳ್ಳಲಿದೆ. ಕಳೆದ ವರ್ಷಗಳಲ್ಲಿ ನಾವು ತೆಗೆದುಕೊಂಡ ವಿವಿಧ ನಿರ್ಧಾರಗಳನ್ನು ಮೌಲ್ಯಮಾಪನ ಮಾಡಲು ವರದಿ ಮಾಡುವ ಸಮಯ ಇದಾಗಿದೆ. ಇಂದು ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಭಯೋತ್ಪಾದನೆ.
ಭಯೋತ್ಪಾದಕರನ್ನು ಬೆಂಬಲಿಸುವ ದೇಶಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಈ ಸಮಸ್ಯೆಯನ್ನು ಸಂಘಟಿತ ರೀತಿಯಲ್ಲಿ ನಿಭಾಯಿಸಲಾಗಿದೆಯೇ ಎಂಬುದನ್ನು ನಮ್ಮನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ನಾವು ಎರಡನೇ ಮಹಾಯುದ್ಧದ ಅಂತ್ಯವನ್ನು ಸ್ಮರಿಸಿದ್ದೇವೆ. ಭಾರತವೂ ಯುದ್ಧದಲ್ಲಿ ದೊಡ್ಡ ಮೊತ್ತದ ಕಾಣಿಕೆ ನೀಡಿತ್ತು. ಯುದ್ಧದ ನಂತರ, ವಿಶ್ವಸಂಸ್ಥೆಯನ್ನು ರಚಿಸಲಾಯಿತು.
ಭಾರತ ವಿಶ್ವಸಂಸ್ಥೆಯ ತತ್ವಗಳಿಗೆ ಬದ್ಧವಾಗಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಆದರೆ, ಇಂದು ವಿಶ್ವಸಂಸ್ಥೆಯ ಸುತ್ತಲೂ ಅನೇಕ ಪ್ರಶ್ನೆಗಳು ಎದ್ದಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳು ಬಹಳ ಮುಖ್ಯವೆಂದು ಭಾರತ ನಂಬುತ್ತದೆ. ಈ ನಿಟ್ಟಿನಲ್ಲಿ ನಾವು ಬ್ರಿಕ್ಸ್‍ನಿಂದ ಬೆಂಬಲ ಪಡೆಯಬಯಸುತ್ತೇವೆ. ಹೀಗಾಗಿ, ಯುಎನ್ ಸಂಬಂಧಿತ ಇತರ ವಿಭಾಗಗಳಲ್ಲಿ ಸುಧಾರಣೆಗಳು ತರಬೇಕಿದೆ ಎಂದು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದರು.
ಕೊರೊನಾ ಬಳಿಕದ ಸೋಂಕಿತರ ಚೇತರಿಕೆ ಪ್ರಮಾಣದಲ್ಲಿ ಬ್ರಿಕ್ಸ್ ರಾಷ್ಟ್ರಗಳು ಭಾರಿ ಪಾತ್ರವನ್ನು ವಹಿಸುತ್ತಿವೆ. ನಮ್ಮ ನಡುವೆ ವ್ಯಾಪಾರ ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ನಮ್ಮ ಆತ್ಮನಿರ್ಭಾರ ಭಾರತ ಮಿಷನ್ ಅಡಿಯಲ್ಲಿ ನಾವು ಭಾರತದಲ್ಲಿ ದೊಡ್ಡ ಸುಧಾರಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ.ಚೀನಾ ಮತ್ತು ಅದರ ನೆರೆಯ ಸ್ನೇಹಿತ ಪಾಕಿಸ್ತಾನಕ್ಕೆ ಈ ವೇದಿಕೆ ಮೂಲಕ ಮುಸುಕು ಸಂದೇಶ ಕಳುಹಿಸಿ ಪ್ರಧಾನಿ, ಸಂಪರ್ಕ ಸುಧಾರಿಸಲು ಇತರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸುವುದು ಅತ್ಯಂತ ಮುಖ್ಯ ಎಂಬುದನ್ನು ಭಾರತ ನಂಬುತ್ತದೆ ಎಂದು ಚೀನಾದ ವಿಸ್ತರಣಾ ನೀತಿಯನ್ನು ಕೆದಕಿದರು.ಪೊಸ್ಟ್ ಕೋವಿಡ್ ಬಳಿಕ ಇದೊಂದು ಗಮನಾರ್ಹ ಶಕ್ತಿಯಾಗಬಹುದು. ಸಾಂಕ್ರಾಮಿಕ ಸಮಯದಲ್ಲಿ ಇದನ್ನೇ ನಾವು ನೂರಾರು ರಾಷ್ಟ್ರಗಳಿಗೆ ವೈದ್ಯಕೀಯ ಉತ್ಪನ್ನಗಳನ್ನು ಸರಬರಾಜು ಮಾಡಲು ಸಹಾಯ ಮಾಡಿದ್ದೇವೆ. ಈಗ ನಾವು ದೊಡ್ಡ ಪ್ರಮಾಣದ ಲಸಿಕೆ ಉತ್ಪಾದನೆಯನ್ನು ಎದುರು ನೋಡುತ್ತಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ