ರಂಗಭೂಮಿ ಕಲಾವಿದೆ ಶಾಂತಮ್ಮ ಪತ್ತಾರ್ ಇನ್ನಿಲ್ಲ

ಇಲಕಲ್ಲ : 2002 ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಇಲಕಲ್ಲಿನ ರಂಗಭೂಮಿ ಕಲಾವಿದೆ ಶಾಂತಮ್ಮ ಪತ್ತಾರ ಇಹಲೋಕ ತ್ಯಜಿಸಿದ್ದಾರೆ. 1942 ರಲ್ಲಿ ಜನಿಸಿದ್ದ ಶಾಂತಮ್ಮ ಅವರು ತಮ್ಮ 13 ನೇ ವಯಸ್ಸಿನಲ್ಲೆ ರಂಗಪ್ರವೇಶ ಮಾಡಿದ್ದರು. ಕುರುಕ್ಷೇತ್ರ, ರಕ್ತರಾತ್ರಿಯಂತಹ ಹಲವಾರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡವರು. ಸುದೀರ್ಘಕಾಲ ರಂಗಭೂಮಿಯನ್ನೇ ಜೀವನವನ್ನಾಗಿಸಿಕೊಂಡಿದ್ದ ಶಾಂತಮ್ಮ ಪತ್ತಾರಾ ಕಲಾಲೋಕವನ್ನು ಅಗಲಿದ್ದಾರೆ. ಶಾಂತಮ್ಮ ಪತ್ತಾರ ಅಗಲಿಕೆಗೆ ಕಲಾಭಿಮಾನಿಗಳು, ರಂಗಕರ್ಮಿಗಳು ಸಂತಾಪ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ