ಇಂದಿನಿಂದ ಬೆಂಗಳೂರಲ್ಲಿ ಓಡಾಡುವಾಗ ಮಾಸ್ಕ್ ಧರಿಸದಿದ್ದರೆ ಬೀಳುತ್ತೆ ಭಾರೀ ದಂಡ!

ಬೆಂಗಳೂರು: ಕೊರೋನಾ ವೈರಸ್​ ಹರಡದಂತೆ ತಡೆಯಲು ಸಾಕಷ್ಟು ರಾಜ್ಯಗಳು ಈಗಾಗಲೇ ಮಾಸ್ಕ್​ ಕಡ್ಡಾಯ ಮಾಡಿವೆ. ಈಗ ಇದೇ ನಿಯಮವನ್ನು ಬೆಂಗಳೂರಿಗೆ ತರಲಾಗಿದೆ. ಬೆಂಗಳೂರಲ್ಲಿ ಮಾಸ್ಕ್​ ಧರಿಸದೆ ಓಡಾಡಿದರೆ ಇಂದಿನಿಂದ ದಂಡ ಬೀಳಲಿದೆ. ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ.

“ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 1 ಸಾವಿರ ರೂಪಾಯಿ ದಂಡ. ಎರಡನೇ ಬಾರಿ ಉಲ್ಲಂಘಿಸಿದರೆ 2 ಸಾವಿರ ರೂಪಾಯಿ ದಂಡ. ಪದೇ ಪದೇ ಉಲ್ಲಂಘಿಸಿದರೆ ಶಿಕ್ಷೆ  ವಿಧಿಸಲು ಚಿಂತನೆ ನಡೆಸಲಾಗಿದೆ,” ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

“ಈಗಾಗಲೇ ದಂಡ ವಿಧಿಸುವ ಹೊಣೆಗಾರಿಕೆ ಮಾರ್ಷಲ್​​ಗಳಿಗೆ ವಿಧಿಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ,” ಎಂದು ಅವರು ತಿಳಿಸಿದರು.

ಕೊರೋನಾ ಸೋಂಕಿತ ವ್ಯಕ್ತಿ ಸೀನಿದಾಗ ವೈರಸ್​ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ಮಾಸ್ಕ್​ ಧರಿಸಿದರೆ ಒಂದೊಮ್ಮೆ ಕೊರೋನಾ ವೈರಸ್​ ಅಂಟಿರುವ ವ್ಯಕ್ತಿ ಸೀನಿದರೂ ವೈರಸ್​ ವಾತಾವರಣ ಸೇರುವ ಸಾಧ್ಯತೆ ತುಂಬಾನೇ ಕಡಿಮೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಈ ರೀತಿಯ ನಿಯಮ ಜಾರಿಗೆ ತರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ