9 ತಿಂಗಳಿಗಾಗುವಷ್ಟು ಆಹಾರ ದಾಸ್ತಾನು ನಮ್ಮಲ್ಲಿದೆ: ಕೇಂದ್ರ ಸರ್ಕಾರ

ನವದೆಹಲಿ: ಭಾರತದಲ್ಲಿ 9 ತಿಂಗಳ ಕಾಲ ದೇಶದ ಪ್ರಜೆಗಳಿಗೆ ವಿತರಿಸುವಷ್ಟು ಆಹಾರಗಳು ದಾಸ್ತಾನು ನಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ನಾಗರಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸುಮಾರು ಒಂಭತ್ತು ತಿಂಗಳ ಕಾಲ, 81 ಕೋಟಿಗೂ ಅಧಿಕ ಫಲಾನುಭಗಳಿಗೆ ವಿತರಿಸಲು ಅಗತ್ಯವಿರುವಷ್ಟು ಅಕ್ಕಿ, ಗೋಧಿ, ದಾಸ್ತಾನು ನಮ್ಮಲ್ಲಿದೆ. ಈ ಬಾರಿ ಉತ್ತಮ ಇಳುವರಿಯಾದ ಕಾರಣ ಸರ್ಕಾರದ ಗೋದಾಮಿನಲ್ಲಿ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸರ್ಕಾರಿ ಗೋದಾಮುಗಳಲ್ಲಿ 299.45 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 235.33 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿ ಒಟ್ಟು 534.78 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ದಾಸ್ತಾನಿದೆ. ಹೀಗಾಗಿ ನಾಗರಿಕರಿಗೆ ಆಹಾರದ ಕೊರತೆ ಆಗುವುದಿಲ್ಲ ಎಂದು ಹೇಳಿದರು.

ನಮ್ಮ ಆಹಾರ ಧಾನ್ಯಗಳ ಸರಬರಾಜು ಮತ್ತು ವಿತರಣೆ ವ್ಯವಸ್ಥೆ ಈಗ ಬಹಳ ಉತ್ತಮವಾಗಿದೆ. ಕೊರೊನಾದಂತಹ ಸಮಸ್ಯೆ ಬಂದಾಗಲೂ ಪ್ರಜೆಗಳಿಗೆ ಸರಿಯಾದ ಸಮಯಕ್ಕೆ ಆಹಾರ ಧಾನ್ಯಗಳನ್ನು ತಲಪಿಸಲಾಗುತ್ತಿದೆ ಎಂದು ತಿಳಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ


Fatal error: Allowed memory size of 268435456 bytes exhausted (tried to allocate 8192 bytes) in /home/deploy/projects/kannada.vartamitra.com/wp-includes/wp-db.php on line 1889