![Baby Dies in Delhi](http://kannada.vartamitra.com/wp-content/uploads/2018/02/Baby-Dies-in-Delhi-678x320.jpg)
ಮಡಿಕೇರಿ: ಕೊರೊನಾ ಸೋಂಕು ತಗಲಬಹುದೆಂಬ ಆತಂಕದಿಂದ ಬಾಣಂತಿ ತಾಯಿ ಹಾಗೂ ನವಜಾತ ಮಗುವಿನ ಬಳಿಗೆ ಯಾರನ್ನೂ ಬಿಡದ ಹಿನ್ನೆಯಲ್ಲಿ ನಾಲ್ಕು ದಿನದ ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಡೊಡ್ಡಕಮರಹಳ್ಳಿ ಗ್ರಾಮದ ಮಂಜುಳಾ-ಚನ್ನಬಸಪ್ಪ ದಂಪತಿಯ ಪುತ್ರಿ ಲಕ್ಷ್ಮಿ ಎಂಬಾಕೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ತಾಯಿ ಮಗು ಇಬ್ಬರು ಆರೋಗ್ಯವಾಗಿ ಇರುವುದಾಗಿ ವೈದ್ಯರು ಹಾಗೂ ದಾದಿ ತಿಳಿಸಿದ್ದರು.
ಈ ನಡುವೆ ಕೊರೋನಾ ಭೀತಿ ಇರುವುದರಿಂದ ದಾದಿಯರು ಮತ್ತು ಸೆಕ್ಯುರಿಟಿ ಗಾರ್ಡ್ಗಳು ತಾಯಿ ಮಗುವಿನ ಬಳಿ ಯಾರನ್ನೂ ಬಿಟ್ಟಿಲ್ಲ. ಸಿಸೇರಿಯನ್ ಆಗಿದ್ದ ಬಾಣಂತಿ ಲಕ್ಷ್ಮಿ ತನ್ನ ಮಗುವಿಗೆ ಸರಿಯಾಗಿ ಹಾಲುಣಿಸಲು ಸಾಧ್ಯವಾಗದೆ ನಾಲ್ಕು ದಿನದ ಮಗುವಿಗೆ ಹಾಲು ನೆತ್ತಿಗೇರಿ ಉಸಿರುಗಟ್ಟಿ ಸಾವನ್ನಪ್ಪಿದೆ.
ಸಿಸೇರಿಯನ್ ಆಗಿದ್ದ ತಾಯಿಯ ಬಳಿ ದಾದಿಯರೂ ಸರಿಯಾಗಿ ಇರುತ್ತಿರಲಿಲ್ಲ. ತಾಯಿ ಮಗುವನ್ನು ನೋಡಿಕೊಳ್ಳಲು ನಮ್ಮನ್ನೂ ಬಿಡಲಿಲ್ಲ. ಹೀಗಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಇದಕ್ಕೆ ಸೆಕ್ಯುರಿಟಿ ಗಾರ್ಡ್ ಮತ್ತು ದಾದಿಯರೇ ನೇರ ಕಾರಣ ಎಂದು ಬಾಣಂತಿ ಲಕ್ಷ್ಮಿಯ ಪೋಷಕರು ಆರೋಪಿಸಿದ್ದಾರೆ.