ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿದ್ದರೆ ಇನ್ನೊಂದೆಡೆ ಸೋಂಕಿನಿಂದ ಗುಣಮುಖ ರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಕೊಂಚ ನೆಮ್ಮದಿ ಮೂಡುವಂತಾಗಿದೆ.
ರಾಜ್ಯದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಟ್ಟು 54 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದಾಗ್ಯೂ ಒಂದೇ ದಿನ 17 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕ ತಂದಿದೆ.
ಇದೇ ವೇಳೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಗುಣಮುಖರಾದವರನ್ನು ಹಾರ್ದಿಕವಾಗಿ ಬೀಳ್ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಏಳು ಜನರು ಗುಣಮುಖರಾಗಿದ್ದು,ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲೂ ಗುಣಮುಖರಾದ ಯುವಕನನ್ನು ಹಾರ್ದಿಕವಾಗಿ ಬೀಳ್ಕೊಡಲಾಯಿತು.
ವೈದ್ಯರ ಕಾಲು ಮುಗಿದ ಯುವಕ
ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೋನಾ ಇಂದ ಗುಣಮುಖನಾಗಿರುವ ಯುವಕ ವೈದ್ಯರಿಗೆ ಧನ್ಯವಾದ ಅರ್ಪಣೆ ಮಾಡಿದ್ದೆನೆ. ಆಸ್ಪತ್ರೆಯ ಅೀಕ್ಷಕ ಡಾ. ವೆಂಕಟೇಶಯ್ಯ, ಆರ್ಎಂಓ ಡಾ.ಮೋಹನ್ ಕುಮಾರ್ ಸೇರಿದಂತೆ ಹಲವು ವೈದ್ಯರಿಗೆ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದ್ದೆನೆ.
ನಿನ್ನೆ ಎಲ್ಲೆಲ್ಲಿ ಎಷ್ಟು
ಭಾನುವಾರ ವಿಜಯಪುರದಲ್ಲಿ 6, ಬೆಳಗಾವಿಯಲ್ಲಿ 4, ಬೆಂಗಳೂರು ನಗರ ಮತ್ತು ಕಲಬುರಗಿಯಲ್ಲಿ ತಲಾ ಮೂರು ಹಾಗೂ ಮೈಸೂರಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಬೆಂಗಳೂರೇ ಟಾಪ್
ಒಟ್ಟಾರೆ ನೋಡುವುದಾದರೆ ಬೆಂಗಳೂರಿನಲ್ಲಿ 76, ಮೈಸೂರಿನಲ್ಲಿ 48, ಬೆಳಗಾವಿಯಲ್ಲಿ 14, ಕಲಬುರಗಿಯಲ್ಲಿ 13 ಮತ್ತು ದಕ್ಷಿಣ ಕನ್ನಡದಲ್ಲಿ 12 ಪ್ರಕರಣಗಳು ಪತ್ತೆಯಾಗಿದೆ.