ಬೆಂಗಳೂರು: ಕೊರೋನಾ ಪರಿಹಾರ ನಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ 3 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಪಿಎಂ ನಿಧಿಗೆ 1 ಲಕ್ಷ ರೂ. ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ.ಗಳನ್ನ ದೇಣಿಗೆ ರೂಪದಲ್ಲಿ ಸಂದಾಯ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಸ್ಪಷ್ಟಪಡಿಸಿರುವ ಅವರು, ಮೂರೂ ಪರಿಹಾರ ನಿಧಿಗಳಿಗೆ ತಲಾ ಒಂದೊಂದು ಲಕ್ಷ ರೂ. ನೀಡಿರುವುದಾಗಿ ಹೇಳಿದ್ದಾರೆ.
ಕೇರಳಕ್ಕೇಕೆ ದೇಣಿಗೆ
ಆದರೆ, ಕೇರಳ ಸರ್ಕಾರಕ್ಕೂ ದೇಣಿಗೆ ನೀಡಿರುವುದಕ್ಕೆ ಸಂಬಂಸಿದಂತೆ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದು, ಕರ್ನಾಟಕದಿಂದ ಸಂಸದರಾಗಿ ಪ್ರಧಾನಿಯಾಗಿದ್ದ ದೇವೇಗೌಡರು, ತಮ್ಮ ಪಿಂಚಣಿ ಹಣವನ್ನು ಕೇರಳಕ್ಕೆ ಪ್ರತ್ಯೇಕವಾಗಿ ನೀಡಿರುವುದೇಕೆ ಎಂದು ಟ್ವಿಟ್ಟರ್ ನಲ್ಲಿ ಜನಸಾಮಾನ್ಯರು ಕಿಡಿ ಕಾರಿದ್ದಾರೆ.
ಕೇರಳ-ಕರ್ನಾಟಕ ಗಡಿ ತೆರವಿಗೂ ಒತ್ತಡ
ಪಿಂಚಣಿ ಹಣವೂ ಜನಸಾಮಾನ್ಯರ ತೆರಿಗೆಯಿಂದಲೇ ಸರ್ಕಾರ ಕೊಡುತ್ತದೆ. ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎನ್ನುತ್ತಲೇ ಬಂದಿದ್ದ ಕಾಂಗ್ರೆಸ್, ಜೆಡಿಎಸ್ ಇಂತಹ ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದೆ ಎಂಬ ವ್ಯಾಖ್ಯಾನವೂ ನಡೆದಿದೆ. ದೇಶದಲ್ಲಿ ಹಲವು ರಾಜ್ಯಗಳಿವೆ ಇದೆಲ್ಲವನ್ನೂ ಬಿಟ್ಟು ಕೇರಳಕ್ಕೆ ಕೊಟ್ಟಿದ್ದರ ಹಿಂದಿನ ಉದ್ದೇಶವೇನು ? ಈ ಹಿಂದೆ ಕರ್ನಾಟಕ-ಕೇರಳ ಗಡಿ ಮುಚ್ಚಿದ್ದಕ್ಕೂ ದೇವೇಗೌಡರು ಆಕ್ಷೇಪಿಸಿದ್ದರು. ಗಡಿ ಮುಚ್ಚಿದ್ದರ ಹಿಂದಿನ ಕಾರಣ ಅರ್ಥ ಮಾಡಿಕೊಳ್ಳದೆ, ಸಿಎಂ ಮೇಲೆ ಒತ್ತಡ ಹೇರುವ ಮೂಲಕ ರಾಜಕಾರಣಕ್ಕಿಳಿದಿದ್ದರು. ಇದೀಗ ಕೇರಳಕ್ಕೆ ದೇಣಿಗೆ ನೀಡಿರುವುದು ಕೂಡ ರಾಜಕೀಯ ಹುನ್ನಾರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.