ಬೆಂಗಳೂರು: ಪೌರ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಚಿವ ಸುರೇಶ್ ಕುಮಾರ್ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ.
ತಮ್ಮ ಮನೆಯ ಮುಂದಿನ ರಸ್ತೆಯ ಕಸ ಗುಡಿಸುವ ಲಿಂಗಮ್ಮ ಅವರ ಕಾಲಿಗೆ ಪಟ್ಟಾಗಿತ್ತು. ಹೀಗಾಗಿ ಇಂದು ಗಂಗಮ್ಮನವರು ಕೆಲಸಕ್ಕೆ ಗೈರಾಗಿದ್ದರು. ರಸ್ತೆಯಲ್ಲಿ ಕಸ ಇರೋದನ್ನು ಗಮನಿಸಿದ ಸಚಿವರು ಪತ್ನಿ ಜೊತೆ ಸೇರಿ ಕಸವನ್ನು ಗುಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಸಚಿವರು, ಇಂದು ಬೆಳಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು. ನಮ್ಮ ರಸ್ತೆಯ ಪೌರ ಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದೆ. ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಕಸ ಗುಡಿಸಿದೆ. ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ ಎಂದಿದ್ದಾರೆ.