ನೆರೆ ರಾಷ್ಟ್ರಗಳಿಗೆ ಭಾರತ ಜೀವರಕ್ಷಕ

ಹೊಸದಿಲ್ಲಿ : ಕೊರೋನಾ ವಿರುದ್ಧ ಹೋರಾಡಲು ಭಾರತ ನೆರೆ ರಾಷ್ಟ್ರಗಳಿಗೆ ಜೀವರಕ್ಷಕ ಔಷಗಳಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಪ್ಯಾರಸಿಟಮಾಲ್ ಅನ್ನು ಉಡುಗೊರೆಯಾಗಿ ಗುರುವಾರ ಕಳುಹಿಸಿದೆ.

ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ಥಾನ, ನೇಪಾಳ, ಮ್ಯಾನ್ಮಾರ್, ಮಾರಿಷಸ್ ಹಾಗೂ ಕೆಲ ಆಫ್ರಿಕಾದೇಶಗಳಿಗೆ ಔಷಧಗಳನ್ನು ಉಡುಗೊರೆಯಾಗಿ ಕಳುಹಿಸಿದೆ ಎಂದು ಸರ್ಕಾರಿ ಅಕಾರಿಗಳು ತಿಳಿಸಿದ್ದಾರೆ. ಇನ್ನು ಮಂಗಳವಾರ ಶ್ರೀಲಂಕಾಗೆ ಏರ್‌ಇಂಡಿಯಾ ಮೂಲಕ ೧೦ ಟನ್‌ಔಷಧ ಕಳುಹಿಸಲಾಗಿದೆ.

ಒಂದೆಡೆ ನೆರೆ ರಾಷ್ಟ್ರಗಳಿಗೆ ಔಷಯನ್ನು ಉಡುಗೊರೆಯಾಗಿ ಕಳುಹಿಸಲಾಗುತ್ತಿದ್ದರೆ, ಇತ್ತ ಅಮೆರಿಕ, ಸ್ಪೇನ್, ಬ್ರೆಜಿಲ್, ಬಹ್ರೇನ್, ಜರ್ಮನಿ ಹಾಗೂ ಬ್ರಿಟನ್‌ಗೆ ಔಷ ರಫ್ತು ಮಾಡುವ ಮೇಲೆ ಹೇರಲಾಗಿದ್ದ ನಿರ್ಬಂಧ ಭಾರತ ತೆರವುಗೊಳಿಸಿದೆ. ಈ ಹಿಂದೆ ಭಾರತೀಯ ಫಾರ್ಮಾಸುಟಿಕಲ್ ಕಂಪನಿಗಳೊಂದಿಗೆ ಈ ರಾಷ್ಟ್ರಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಪ್ಯಾರಸಿಟಮಾಲ್ ಪೂರೈಕೆಗೆಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಮೇರೆಗೆ ಔಷಧ ರಫ್ತು ಮಾಡಲಾಗುತ್ತಿದೆ.

ಇನ್ನು ಔಷಧ ರಫ್ತು ಮಾಡುವ ಕುರಿತು ವಾಣಿಜ್ಯ ಸಚಿವಾಲಯ ಸಂಬಂತ ಅಕಾರಿಗಳಿಗೆ ಸೂಚನೆ ನೀಡಿದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ವಿಶೇಷ ಆರ್ಥಿಕ ವಲಯಗಳಿಂದ ವಿದೇಶಿ ರಫ್ತು ಸ್ವೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ನೆರವಿನ ಅಗತ್ಯ ಹೆಚ್ಚಾಗಬಹುದೆಂದು ಈ ಕ್ರಮವನ್ನು ಭಾರತ ಸರ್ಕಾರ ತೆಗೆದುಕೊಂಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನ ಅಮೆರಿಕ ಅಧ್ಯಕ್ಷ ಡೊನಾಲ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ. ಅಮೆರಿಕದೊಂದಿಗೆ ಗಲ್ ರಾಷ್ಟ್ರಗಳಲ್ಲೂ ಎದುರಾಗುವ ಔಷಧ ಬೇಡಿಕೆಯನ್ನು ಭಾರತ ಗಮನದಲ್ಲಿಟ್ಟುಕೊಂಡಿದೆ. ಇದರೊಂದಿಗೆ ಇಂಡೋ- ಪೆಸಿಫಿಕ್ ರಾಷ್ಟ್ರಗಳಾದ ಬ್ರಿಟನ್, ಸ್ಪೇನ್ ಹಾಗೂ ಇಟಲಿಯಲ್ಲಿ ಕೊರೋನಾದಿಂದ ಸ್ಥಿತಿ ಭೀಕರವಾಗಿದ್ದು, ಈ ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯದ ಅಕಾರಿ ಹೇಳಿದ್ದಾರೆ.

ಭಾರತದ ನಾಯಕತ್ವತಡೆಯಲು ಪಾಕ್ ಕುತಂತ್ರ:

ಸಾರ್ಕ್ ರಾಷ್ಟ್ರಗಳ ಒಕ್ಕೂಟದಲ್ಲಿ ಕೊರೋನಾಗೆ ಪರಿಹಾರ ಕಂಡುಕೊಳ್ಳಲು ಭಾರತ ನಾಯಕತ್ವ ವಹಿಸಿರುವುದನ್ನು ತಡೆಯಲು, ಪಾಕಿಸ್ಥಾನ ಹೊಸ ತಗಾದೆ ತೆಗೆದಿದೆ. ಈ ಬೆನ್ನ ಸಾರ್ಕ್ ರಾಷ್ಟ್ರಗಳ ವ್ಯಾಪಾರ ಅಕಾರಿಗಳ ನಡುವೆ ನಡೆದ ವಿಡಿಯೋ ಕಾನರೆನ್ಸ್ ಸಭೆಗೆ ಪಾಕ್ ಗೈರಾಗಿದೆ. ಕೊರೋನಾ ವಿರುದ್ಧ ಒಟ್ಟಾಗಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಾರ್ಕ್ ರಾಷ್ಟ್ರಗಳಿಗೂ ಕರೆ ನೀಡಿದ್ದರು. ಆದರೆ ಈ  ಕಾರ್ಯದಲ್ಲಿ ಭಾರತ ನಾಯಕತ್ವ ವಹಿಸಿದ್ದು, ಸಾರ್ಕ್ ಕಾರ್ಯದರ್ಶಿ ಇದರಲ್ಲಿ ಭಾಗಿಯಾಗಿಲ್ಲ. ಆದರಿಂದ ಇದೊಂದು ಸಾರ್ಕ್ ಬಾಹಿರ ಚಟುವಟಿಕೆ ಎಂದು ನಾವು ಪರಿಗಣಿಸುತ್ತಿದ್ದೇವೆ ಎಂದು ಪಾಕ್ ಸಮಜಾಯಿಷಿ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ