ಬೆಂಗಳೂರು, ಏ.8- ಕೊರೊನಾ ವೈರಾಣು ಹೇಗಿರುತ್ತದೆ, ಅದು ಮನುಷ್ಯನ ದೇಹಕ್ಕೆ ಯಾವ ರೀತಿ ಸೇರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಕೊರೊನಾ ಅದು ಪ್ರಾಣ ಇಲ್ಲದ ಒಂದು ಪ್ರೊಟೀನ್ ಪದಾರ್ಥದ ವೈರಾಣು. ಅದರ ಮೇಲೆ ಕೊಬ್ಬಿನ ಅಂಶವಿರುತ್ತದೆ. ಆ ಕೊಬ್ಬು ಪೊರೆಯಾಗಿ ಮಾರ್ಪಟ್ಟು ಒಂದು ರೀತಿಯ ಪೌಡರ್ ಆಗಿರುತ್ತದೆ.
ಕೊರೊನಾ ಪದದ ಅರ್ಥ ಕಿರೀಟ. ಈ ವೈರಾಣು ನೋಡಲು ಕಿರೀಟದಂತಿರುವುದರಿಂದ ಕೊರೊನಾ ಎಂಬ ಹೆಸರು ಬಂದಿದೆ. ಈ ವೈರಾಣು ಬೇರೆ ವೈರಾಣುಗಳಿಗಿಂತ ಸ್ವಲ್ಪ ಭಾರವಾಗಿರುತ್ತದೆ. ಆ ಕಾರಣಕ್ಕಾಗಿ ಕೊರೊನಾ ವೈರಾಣುಗಳು ಗಾಳಿಯಲ್ಲಿ ತೇಲಾಡುವುದಿಲ್ಲ.
ಒಂದು ವೇಳೆ ಇತರ ವೈರಾಣುಗಳಂತೆ ಗಾಳಿಯಲ್ಲಿ ಹಾರುವಂತಿದ್ದರೆ ಈ ವೇಳೆಗಾಗಲೇ ಜಗತ್ತಿನ ಅರ್ಧ ಜನ ಸಾವನ್ನಪ್ಪುವ ಸಾಧ್ಯತೆ ಇರುತ್ತಿತ್ತು.
ಕೊರೊನಾ ವೈರಾಣು ಬಹುತೇಕ ಭೂಮಿಯಲ್ಲೇ ಬಿದ್ದಿರುತ್ತದೆ. 14 ದಿನಗಳ ಕಾಲ ನಿರ್ಜೀವ ಕಣವಾಗಿಯೇ ಇರುತ್ತದೆ. ಇದಕ್ಕೆ ಜೀವ ಬರಬೇಕಾದರೆ ಯಾವುದಾದರೂ ಜೀವಕೋಶದ ಆಶ್ರಯ ಬೇಕೇ ಬೇಕು.
ಮನುಷ್ಯ ದೇಹದ ಕಣ್ಣು, ಮೂಗು, ಬಾಯಿ ನಿರ್ಜೀವ ಕೊರೊನಾಗೆ ಜೀವ ತುಂಬುತ್ತದೆ. ಕಣ್ಣಿನ ಪಿಸರು ಕೊರೊನಾ ವೈರಾಣು ಸಂಪರ್ಕಕ್ಕೆ ಬಂದರೆ ಅದಕ್ಕೆ ಜೀವ ಬರುತ್ತದೆ. ಅದೇ ರೀತಿ ಮೂಗು ಸಹ ಕೊರೊನಾದ ಫೇವರಿಟ್ ಸ್ಪಾಟ್. ಮೂಗಿನ ಸಿಂಬಳ ಇದಕ್ಕೆ ಆಮ್ಲಜನಕವಾಗಿ ಪರಿಣಮಿಸುತ್ತದೆ.
ನಮ್ಮ ಗಂಟಲ ಕಫ ಇದಕ್ಕೆ ಹೆಚ್ಚು ಆಶ್ರಯ ನೀಡುವ ಹಾಟ್ಸ್ಪಾಟ್. ಈ ಮೂರು ಅಂಗಗಳು ಕೊರೊನಾ ವೈರಸ್ಗೆ ಸಿಕ್ಕಿದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಕಣಗಳಾಗಿ ವಿಭಜನೆಯಾಗಿ ಶ್ವಾಸಕೋಶ ಸೇರುತ್ತವೆ.
ಒಮ್ಮೆ ಕೊರೊನಾ ವೈರಸ್ ಶ್ವಾಸಕೋಶ ಸೇರಿದರೆ ಅವು ಪ್ರಾಣವಾಯುವನ್ನು ನಿರೋಧಿಸುತ್ತದೆ. ಆಗ ರೋಗಿ ಪ್ರಾಣವಾಯು ಸಿಗದೆ ಮರಣ ಹೊಂದುವ ಸಾಧ್ಯತೆ ಇರುತ್ತದೆ.
ಇದರ ಜತೆಗೆ ನೆಗಡಿ ಹೆಚ್ಚಾಗಿ ರೋಗಿ ಸೀನಿದಾಗ, ಕೆಮ್ಮಿದಾಗ ಕೊರೊನಾ ವೈರಾಣುಗಳು ಎಲ್ಲೆಂದರಲ್ಲಿ ಬೀಳುತ್ತವೆ. ಅಂತಹ ವೈರಾಣುಗಳು ಸಮೀಪವಿರುವ ವ್ಯಕ್ತಿಯ ಮೇಲೆ ಬಿದ್ದರೆ ಆ ವ್ಯಕ್ತಿಯ ದೇಹವನ್ನು ಕೊರೊನಾ ವೈರಾಣುಗಳು ಪ್ರವೇಶಿಸುತ್ತವೆ.
ತಾಪಮಾನಕ್ಕೆ ಅನುಗುಣವಾಗಿ ಕೊರೊನಾ ವೈರಸ್ 4 ರಿಂದ 24 ಗಂಟೆವರೆಗೆ ಶಕ್ತಿಯುತವಾಗಿರುತ್ತದೆ. ಸೂರ್ಯನ ತಾಪ ವೈರಾಣುಗಳ ಮೇಲೆ ಬಿದ್ದರೆ ವೈರಾಣುಗಳ ಮೇಲಿನ ಕೊಬ್ಬಿನ ಪೊರೆ ಕರಗಿ ಹೋಗಿ ಶಕ್ತಿಗುಂದುತ್ತದೆ.
ಕೊರೊನಾ ವೈರಸ್ ತನ್ನಿಂದ ತಾನೇ ಯಾರನ್ನೂ ಅಂಟಿಕೊಳ್ಳಲಾರದು. ನಾವು ಅವುಗಳನ್ನು ಸ್ಪರ್ಶಿಸಿದಾಗ ನಮ್ಮ ಕೈ ಬೆರಳುಗಳಿಗೆ ಅಂಟಿಕೊಳ್ಳುತ್ತವೆ. ನಮ್ಮ ಕೈಗಳಿಂದ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸಿದಾಗ ಅವು ಆ್ಯಕ್ಟೀವ್ ಆಗಿ ದೇಹದಲ್ಲಿ ಆಶ್ರಯ ಪಡೆಯುತ್ತವೆ.
ಕಣ್ಣಿನ ಪಿಸರೆಗೆ ಸೇರಿಕೊಂಡರೆ ಅದು ಕಣ್ಣೀರಾಗಿ ವೃದ್ಧಿಗೊಂಡು ಮೂಗಿನ ಕಡೆ ಜಾರಿ ಮೂಗಿನ ದ್ವಾರವನ್ನು ಸೇರುತ್ತದೆ. ಮೂಗಿನ ಮೂಲಕ ಬಾಯಿ ಸೇರಿ ಅಲ್ಲಿಂದ ಗಂಟಲಿಗೆ ಪ್ರಯಾಣ ಬೆಳೆಸಿ ದೇಹ ಸೇರುತ್ತದೆ.
ಇಲ್ಲಿಯವರೆಗೆ ಕೊರೊನಾ ವೈರಸ್ಗೆ ಯಾವುದೇ ನಿರ್ದಿಷ್ಟ ಮದ್ದು ಕಂಡುಹಿಡಿದಿಲ್ಲ. ಆದರೆ, ಕೊರೊನಾ ವೈರಾಣುವಿನ ಬಲಹೀನತೆ ಆಧಾರದ ಮೇಲೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬಹುದಾಗಿದೆ. ಕೊರೊನಾ ವೈರಾಣುಗಳ ಮೇಲಿರುವ ಕೊಬ್ಬಿನ ಅಂಶ ನಾಶ ಮಾಡಿದರೆ ನಾವು ರೋಗದಿಂದ ಮುಕ್ತರಾಗಬಹುದು.
ಹೀಗಾಗಿ ಬಿಸಿನೀರನ್ನು ಮೈಮೇಲೆ ಸುರಿದುಕೊಂಡು ನೊರೆ ಬರುವ ಸಾಬೀನಿನಲ್ಲಿ ಪ್ರತಿದಿನ ಎರಡರಿಂದ ಮೂರು ಬಾರಿ ಸ್ನಾನ ಮಾಡಿದರೆ ನಮ್ಮ ದೇಹಕ್ಕೆ ಅಂಟಿಕೊಂಡಿರುವ ಕೊರೊನಾ ವೈರಾಣುವಿನ ಕೊಬ್ಬಿನ ಅಂಶ ಕರಗಿ ಅವು ನಾಶವಾಗುತ್ತವೆ. ನಂತರ ಕೊಬ್ಬರಿ ಎಣ್ಣೆಯನ್ನು ನಮ್ಮ ಮೈಗೆ ಲೇಪಿಸಿಕೊಂಡರೆ ಉಳಿದಿರುವ ವೈರಾಣುಗಳು ಎಣ್ಣೆ ಜಿಡ್ಡಿಗೆ ಅಂಟಿಕೊಂಡು ಸಾವನ್ನಪ್ಪುತ್ತವೆ. ಇದರ ಜತೆಗೆ ನಾವು ಧರಿಸಿದ ಬಟ್ಟೆ, ಕರ್ಚಿಫ್ ಮತ್ತಿತರ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಕೊರೊನಾ ವೈರಾಣುವಿನಿಂದ ಬಚಾವ್ ಆಗಬಹುದು.
ಇದಕ್ಕಿರುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಒಬ್ಬ ಮನುಷ್ಯ ಕೊರೊನಾ ವೈರಾಣುವಿನಿಂದ ರಕ್ಷಿಸಿಕೊಂಡರೆ ಸಾವಿರಾರು ಮಂದಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಹೀಗಾಗಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ಪದೇ ಪದೇ ಕೈ ತೊಳೆದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಮಾಡುವುದು, ಮೂಗಿಗೆ ಮಾಸ್ಕ್ ಧರಿಸುವುದು ಸೂಕ್ತ.