ಬೀಜಿಂಗ್/ವುಹಾನ್, ಏ.8-ಇಡೀ ವಿಶ್ವದಾದ್ಯಂತ ಭಾರೀ ಆತಂಕ ಸೃಷ್ಟಿಗೆ ಕಾರಣವಾದ ಕೊರೊನಾ ವೈರಸ್ನ ಉಗಮ ಸ್ಥಳ ಮತ್ತು ಕೇಂದ್ರ ಬಿಂದುವಾದ ಚೀನಾದ ವುಹಾನ್ ನಗರದಲ್ಲಿ 73 ದಿನಗಳ ಬಳಿಕ ಲಾಕ್ಡೌನ್ನನ್ನು ಸಂಪೂರ್ಣ ತೆರವುಗೊಳಿಸಲಾಗಿದೆ.
ಮತ್ತೊಂದು ಆತಂಕದ ಸಂಗತಿ ಎಂದರೆ ಚೀನಾದಲ್ಲಿ ಎರಡು ಹೊಸ ಸಾವು ಮತ್ತು 1,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಮತ್ತೆ ಪತ್ತೆಯಾಗಿದ್ದರೂ ಕೂಡ ನಗರದಲ್ಲಿ ಲಾಕ್ಡೌನ್ ತೆರವುಗೊಳಿಸಿರುವುದು ಕಿಲ್ಲರ್ ಸಾಂಕ್ರಾಮಿಕ ರೋಗ ಮತ್ತೆ ಉಲ್ಬಣಗೊಳ್ಳುವ ಆತಂಕ ಸೃಷ್ಟಿಸಿದೆ.
ಲಾಕ್ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ಸಹಸ್ರಾರು ಜನರು ರೈಲು ನಿಲ್ದಾಣಗಳಿಗೆ ಆಗಮಿಸಿ ತಮ್ಮ ಊರುಗಳಿಗೆ ತೆರಳುತ್ತಿದ್ದ ದೃಶ್ಯ ಇಂದು ಬೆಳಗ್ಗೆ ಸಾಮಾನ್ಯವಾಗಿ ಕಂಡು ಬಂತು.
ಚೀನಾದ ಹೆಬೀ ಪ್ರಾಂತ್ಯದಲ್ಲಿ ಡಿಸೆಂಬರ್ ಎರಡನೇ ವಾರಾಂತ್ಯದಲ್ಲಿ ಮೊದಲ ಬಾರಿಗೆ ಸಾರ್ಸ್(ನೆಗೆಡಿ, ಕೆಮ್ಮು, ಜ್ಮರ ಮತ್ತು ಉಸಿರಾಟ ತೊಂದರೆ ಲಕ್ಷಣಗಳ) ಮಾದರಿಯ ಸೋಂಕು ಕಾಣಿಸಿಕೊಂಡು ವ್ಯಾಪಿಸಿತು. ಇದರಿಂದ ಎಚ್ಚೆತ್ತ ಸರ್ಕಾರ ವುಹಾನ್ ನಗರದಲ್ಲಿ ಜನವರಿ ಮೊದಲ ನಿರ್ಬಂಧ ವಿಧಿಸಿ ಸಾರ್ವಜನಿಕ ಸಂಚಾರವನ್ನು ನಿಷೇಧಿಸಿತ್ತು.
ಈಗ ಕೋವಿಡ್-19 ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿಕೊಂಡಿರುವ ಚೀನಾ ಸರ್ಕಾರ ಲಾಕ್ಡೌನ್ ತೆರವುಗೊಳಿಸಿದೆ. ಆದರೆ ಮತ್ತೆ ಹೊಸ ಪ್ರಕರಣಗಳು ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ನಿರ್ಬಂಧ ರದ್ದು ನಿರ್ದಾರದ ಔಚಿತ್ಯವನ್ನು ಪ್ರಶ್ನಿಸುವಂತಾಗಿದೆ