ಬೆಂಗಳೂರು, ಏ.8- ತುರ್ತು ನಿರ್ವಹಣೆಗಾಗಿ ವಿವಿಧ ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ರಸ್ತೆಗಿಳಿಸಿದೆ.
ಆಯಾ ಡಿಪೋ ವ್ಯಾಪ್ತಿಗಳಲ್ಲಿ ಮುನ್ನೆಚ್ಚರಿಕೆ ಹಾಗೂ ಎಲ್ಲಾ ಆರೋಗ್ಯ ಭದ್ರತೆಯೊಂದಿಗೆ ಬಸ್ಗಳು ರಸ್ತೆಗಿಳಿಯಲಿವೆ ಎಂದು ನಿಗಮದ ಮೂಲಗಳು ತಿಳಿಸಿವೆ.
ರಾಮನಗರ – 1 ಬಸ್, ಮೈಸೂರು – 4 ಬಸ್ಗಳು, ಮಂಗಳೂರು- 4 ಬಸ್, ದಾವಣಗೆರೆ- 1 ಬಸ್, ಶಿವಮೊಗ್ಗ – 6 ಬಸ್ಗಳು ಒಟ್ಟು 16 ಬಸ್ಗಳನ್ನು ಜಿಲ್ಲಾಡಳಿತಕ್ಕೆ ತುರ್ತು ಹಾಗೂ ಅವಶ್ಯಕ ಸೇವೆಗಳಿಗಾಗಿ ಕಾರ್ಯಚರಣೆಗೊಳಿಸಲಾಗುತ್ತಿದೆ ಹಾಗೂ 10 ಬಸ್ ನಿಲ್ದಾಣಗಳನ್ನು ಮಾರುಕಟ್ಟೆ ಹಾಗೂ ದಿನಸಿ ಅಂಗಡಿಗಳ ಸೇವೆಗಾಗಿ ನೀಡಲಾಗಿದೆ.
ಏ.9ರಂದು ನಿಗಮದ ಎಲ್ಲಾ ಹಿರಿಯ ಅಧಿಕಾರಿಗಳು ತಮ್ಮ ಉಸ್ತುವಾರಿ ವಿಭಾಗ/ ಘಟಕಗಳಿಗೆ ಭೇಟಿ ನೀಡಿ, ಸಿಬ್ಬಂದಿಗಳ ಆರೋಗ್ಯ, ಮಾಸ್ಕ್ಗಳ ಲಭ್ಯತೆ ಹಾಗೂ ಬಳಕೆ, ಸ್ವಚ್ಚತಾ ಕಾರ್ಯ ಹಾಗೂ ಬಸ್ಗಳನ್ನು ಘಟಕಗಳಲ್ಲಿ ನಿಲ್ಲಿಸುವ ಬಗ್ಗೆ ಈಗಾಗಲೇ ನೀಡಲಾಗಿರುವ ಆದೇಶದಂತೆ ಬೆಂಕಿ ಅನಾಹುತ ತಪ್ಪಿಸಲು ಪಾರ್ಕ್ ಮಾಡಲಾಗಿರುವ ಬಗ್ಗೆ ಪರಿವೀಕ್ಷಣೆ ನಡೆಸಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಆದೇಶಿಸಿದ್ದಾರೆ.